ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶಿಲುಬೆ ಕಟ್ಟೆ ಧ್ವಂಸ: ಕ್ರೈಸ್ತರಿಂದ ಪ್ರತಿಭಟನೆ

Lingaraj Badiger
Updated On : 11 Jan 2014, 11:49 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಜ.10
ತಾಲೂಕಿನ ಠಾಣಾಗುಂದಿಯಲ್ಲಿ ಗುರುವಾರ ರಾತ್ರಿ ಜರುಗಿದ ಶಿಲುಬೆಕಟ್ಟೆ ಧ್ವಂಸ ಪ್ರಕರಣವನ್ನು ಖಂಡಿಸಿ ಜಿಲ್ಲಾ ಮೇಲ್ಚಿಚಾರಕ ಪಾಲ್  ಮಧುಕರ್ ನೇತೃತ್ವದಲ್ಲಿ ಕ್ರೈಸ್ತ ಸಮುದಾಯದವರು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮೆಥೋಡಿಸ್ ್ಟ ಚರ್ಚ್‌ನ ಜಿಲ್ಲಾ ಮೇಲ್ವಿಚಾರಕ ಪಾಲ್ ಮಧುಕರ ನೇತೃತ್ವದಲ್ಲಿ ಸಭೆ ಸೇರಿದ ಸಮುದಾಯದವರು ಘಟನೆಯನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡಲು ನಿರ್ಧರಿಸಿ, ಡಿಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಶಿಲುಬೆ ಕಟ್ಟೆ: ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮೇಲ್ಚಿಚಾರಕ ಪಾಲ್ ಮಧುಕರ್, ಗ್ರಾಮಕ್ಕೆ ಹೊಂದಿಕೊಂಡಿರುವ ಈ ಕಟ್ಟೆ ಶಿಲುಬೆ ಕಟ್ಟೆ ಎಂದೇ ಪ್ರತೀತಿ ಹೊಂದಿದೆ. ಗುರುವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಕೊಡಲಿಯಿಂದ ಕೊಚ್ಚಿದ ಪರಿಣಾಮ ಕಟ್ಟಿಗೆಯ ಶಿಲುಬೆ ಧ್ವಂಸಗೊಂಡಿದೆ. ಇದಲ್ಲದೇ ಸುತ್ತಲೂ ಇದ್ದ ಕಂಬಗಳನ್ನು ಹಾಕಿ ಅದಕ್ಕೆ ಮುಳ್ಳು ತಂತಿಯನ್ನು ಹಾಕಲಾಗಿತ್ತು. ಕಬ್ಬಿಣದ ಶಿಲುಬೆಗಳನ್ನು ಸಹಾ ಧ್ವಂಸಗೊಳಿಸಿ ಚೆಲ್ಲಾಪಿಲ್ಲಿಯಾಗಿ ಹಾಕಿರುವುದು ನೋವುಂಟು ಮಾಡಿದೆ ಎಂದರು.
ಕಪ್ಪು ಚುಕ್ಕೆ: ಎಲ್ಲ ಸಮುದಾಯಗಳು ಕೂಡಿ ಬಾಳುವ ಕರ್ನಾಟಕದ ವಿಶೇಷ ಸೌಹಾರ್ದತೆ ಹೊಂದಿದೆ. ಇಂತಹ ಘಟನೆಗಳು ಕಪ್ಪು ಚುಕ್ಕೆಯಾಗಿವೆ ಎಂದು ಖೇದ ವ್ಯಕ್ತಪಡಿಸಿದರು.
ದುಷ್ಕೃತ್ಯ: ಪ್ರತಿವರ್ಷ ಈಸ್ಟರ್ ಸಂದರ್ಭದಲ್ಲಿ ಇಲ್ಲಿ ಕ್ರಿಶ್ಚಿಯನ್ನರು ವಾಡಿಕೆಯಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇದೀಗ ಕ್ರಿಸ್ಮ್‌ಸ್ ಮುಗಿದು, ಈಸ್ಟರ್‌ಗೆ ತಿಂಗಳು ಬಾಕಿ ಇರುವಾಗ ಇಂತಹ ದುಷ್ಕೃತ್ಯ ನಡೆದಿದೆ. ಇದನ್ನು ತನಿಖೆ ನಡೆಸಿ ಅಪರಾಧಿಗಳನ್ನು ಬಂಧಿಸಿ, ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬಾಲಮಿತ್ರ ಅಬೆಲ್, ಇಮಾನುವೆಲ್ ಬೆಳ್ಳಿ, ವೈ.ಎಸ್. ಸಾಮುವೆಲ್, ವಿಜಯರತ್ನ, ಡೇವಿಡ್ ಯೇಸುಮಿತ್ರ ಠಾಣಾಗುಂದಿ, ಡೇವಿಡ್ ಠಾಣಾಗುಂದಿ, ಶಾಂತರಾಜ ಹೊಸಮನಿ, ಕ್ರೈಸ್ತ ಹಿತ ರಕ್ಷಣಾ ಸಂಘದ ರಾಜ್ಯಾಧ್ಯಕ್ಷ ಅನಿಲಕುಮಾರ ಮಾಸನ, ನಿಂಗಪ್ಪ ಮ್ಯಾಗೇರಿ ಇನ್ನಿತರರು ಪಾಲ್ಗೊಂಡಿದ್ದರು.
ಶಿಲುಬೆಕಟ್ಟೆ:  ಗ್ರಾಮಕ್ಕೆ ಹೊಂದಿಕೊಂಡಿರುವ ಈ ಕಟ್ಟೆ ಶಿಲುಬೆ ಕಟ್ಟೆ ಎಂದೇ ಪ್ರತೀತಿ ಹೊಂದಿತ್ತು. ಗುರುವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಕೊಡಲಿಯಿಂದ ಕೊಚ್ಚಿದ ಪರಿಣಾಮ ಕಟ್ಟಿಗೆಯ ಶಿಲುಬೆ ಧ್ವಂಸಗೊಂಡಿದೆ. ಇದಲ್ಲದೇ ಸುತ್ತಲೂ ಇದ್ದ ಕಬ್ಬಿಣದ ಶಿಲುಬೆಗಳನ್ನು ಸಹಾ ಧ್ವಂಸಗೊಳಿಸಿ ಚೆಲ್ಲಾಪಿಲ್ಲಿಯಾಗಿ ಹಾಕಿರುವುದು ಕಂಡುಬಂದಿದೆ. ಪ್ರತಿವರ್ಷ ಈಸ್ಟರ್ ಸಂದರ್ಭದಲ್ಲಿ ಇಲ್ಲಿ ಕ್ರಿಶ್ಚಿಯನ್ನರು ವಾಡಿಕೆಯಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇದೀಗ ಕ್ರಿಸ್ಮ್‌ಸ್ ಮುಗಿದು ಈಸ್ಟರ್ ಬರಲು ತಿಂಗಳು ಬಾಕಿ ಇರುವಾಗ ಇಂತಹ ದುಷ್ಕೃತ್ಯ ನಡೆದಿರುವುದು ಆತಂಕ ಮೂಡಿಸಿದೆ.
ಪೊಲೀಸರ ಭೇಟಿ: ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಕಂ, ಗ್ರಾಮೀಣ ಪಿಎಸ್‌ಐ ಮಲ್ಲಿಕಾರ್ಜುನ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement