ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅತಿಥಿ ಶಿಕ್ಷಕರ ಸಮಸ್ಯೆ ಬಗೆಹರಿಸಲು ಒತ್ತಾಯ

Rashmi Kasaragodu
Updated On : 12 Jan 2014, 1:10 am

ಯಾದಗಿರಿ: ಹೈ.ಕ ಪ್ರದೇಶಕ್ಕೆ ಈಗಾಗಲೇ ಸಂವಿಧಾನದ 371ನೇ ಕಲಂ ಜಾರಿಯಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಭಾಗದ 6 ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಸರ್ಕಾರ ನೇಮಕಾತಿ ಸಂದರ್ಭದಲ್ಲಿ 5 ಕೃಪಾಂಕ ನೀಡಬೇಕು. ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ಅತಿಥಿ ಶಿಕ್ಷಕ  ಸಿದ್ದಪ್ಪ ಮಲಕಪನಹಳ್ಳಿ ಹೇಳಿದರು.
ಶನಿವಾರ ಇಲ್ಲಿನ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರೆಯಲಾಗಿದ್ದ ಅತಿಥಿ ಶಿಕ್ಷಕರ ಸಭೆಯನ್ನು ಉದ್ದೇಶಿಸಿ, ರಾಜ್ಯದಲ್ಲಿ ಅತಿಥಿ ಶಿಕ್ಷಕರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಕೂಡಲೇ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರನ್ನು ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು ಎಂದರು.
ಸಮಸ್ಯೆಗೆ ಸ್ಪಂದಿಸಿ: ಶಿಕ್ಷಣ ಇಲಾಖೆಯಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ತಿಂಗಳಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಶಾಲೆಗೆ ತೆರಳಿ ಪಾಠ ಬೋಧನೆಯಲ್ಲಿ ತೊಡಗಿಕೊಳ್ಳುವ ಅತಿಥಿ ಶಿಕ್ಷಕರು ನಿಸ್ವಾರ್ಥದಿಂದ ಮಕ್ಕಳಿಗೆ ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಅತಿಥಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಇನ್ನೊಬ್ಬ ಶಿಕ್ಷಕ ಅರುಣ ಮಾಸನ್ ಮಾತನಾಡಿ, ಸದ್ಯ ಅತಿಥಿ ಶಿಕ್ಷಕರಿಗೆ ರು. 5 ಸಾವಿರ ಗೌರವ ಧನ ನೀಡುತ್ತಿದ್ದಾರೆ. ಸರ್ಕಾರ ಕೂಡಲೇ ಇದನ್ನು ರು. 10 ಸಾವಿರಕ್ಕೆ ಏರಿಸಲು ಕ್ರಮ ತೆಗೆದುಕೊಳ್ಳಬೇಕು. ಅತಿಥಿ ಶಿಕ್ಷಕರು ವೇತನವನ್ನು ನೇರವಾಗಿ ನಮ್ಮ ಖಾತೆಗಳಿಗೆ ಜಮಾ ಮಾಡಬೇಕು. ಪ್ರತಿ ತಿಂಗಳು ಕನಿಷ್ಠ 2 ದಿನವಾದರೂ ರಜೆ ನೀಡಬೇಕು. ಅಲ್ಲದೆ ಮಹಿಳಾ ಶಿಕ್ಷಕಿಯರಿಗೆ ಹೆರಿಗೆ ರಜೆ ನೀಡಬೇಕಿದೆ ಎಂದರು. ಚಂದ್ರಕಾಂತ ಛಲವಾದಿ, ಹೊನ್ನಪ್ಪ ಖಾನಾಪುರ, ದೇವಿಂದ್ರಪ್ಪ ಗೋಡಿಕಾರ ಯರಗೋಳ, ಬಸಲಿಂಗಪ್ಪ ಕಿಲ್ಲನಕೇರಾ, ಮಲ್ಲಯ್ಯ ಬಳಿಚಕ್ರ, ಹಣಮಂತ ಶಹಾಪುರ, ಮಮತಾ, ಶಾಲಿನಿ, ಹಣಮಂತ್ರಾಯ ತಡಿಬಿಡಿ, ವಿಶ್ವನಾಥ ಬಾಡಿಯಾಲ, ಮೌನೇಶ ಸೈದಾಪುರ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement