ಅಧಿಕಾರಿಗಳಿಲ್ಲದ ಅಫಜಲ್ಪುರ ತಾಪಂ ಸಭೆ
ಅಫಜಲ್ಪರ: ಸಾಮಾನ್ಯ ಸಭೆಗೆ ಅಧಿಕಾರಿಗಳು ಬಾರದೆ ಇರುವ ಸಂಗತಿ ಇಲ್ಲಿನ ತಾಪಂ ಸಭೆಯಲ್ಲಿ ಮುಖ್ಯಾಧಿಕಾರಿ ಎಸ್.ಪಿ. ನಂದಗಿರಿ ಅವರನ್ನು ಕೆರಳಿಸಿತು. ತಾಪಂ ಅಧ್ಯಕ್ಷೆ ಶಾರದಾಬಾಯಿ ಗಂಡೋಳಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಗೆ ಹೆಚ್ಚಿನ ಇಲಾಖೆ ಅಧಿಕಾರಿಗಳೇ ಬಂದಿರಲಿಲ್ಲ. ಅಧಿಕಾರಿಗಳು ತಮ್ಮ ಇಲಾಖೆ ದಾಖಲೆಗಳನ್ನು ತಾವೇ ಬಂದು ಸಭೆಗೆ ತಿಳಿಸುವುದು ಒಳ್ಳೆಯದು. ಅದು ಬಿಟ್ಟು ಸಹಾಯಕ ಅಧಿಕಾರಿಗಳನ್ನು ಇನ್ನು ಮುಂದೆ ಕಳುಹಿಸಿದರೆ ಕ್ರಮ ಕೈಗೊಳ್ಳುವುದಾಗಿ ನಂದಗಿರಿ ಹೇಳಿದರು. ತಾಪಂ ಸದಸ್ಯೆ ಅನೀತಾ ಅಕ್ಕಲಕೋಟೆ, ಸಾ.ಸಿ ಬೆನಕನಳ್ಳಿ ಮಾತನಾಡಿ ಅಧಿಕಾರಿಗಳ ಗೈರಿಗೆ ಆಕ್ಷೇಪಿಸಿದರು. ಸದಸ್ಯರಾದ ಶಿವಪುತ್ರಪ್ಪ ಗೌಡಗಾಂವ, ಶಿವಾನಂದ ಗಾಡಿ ಗರಂ ಆದ ಘಟನೆ ನಡೆಯಿತು. ಸದಸ್ಯರಾದ ದತ್ತು ಸಿಂಧೆ, ಶಿವಪುತ್ರಪ್ಪ ಕರೂರ, ಶಿವಾನಂದ ಗಾಡಿ, ಪ್ರಭುಲಿಂಗ ತುಕರಾಮ, ಹುಣಚಪ್ಪ ಅಂತರಗಂಗಿ, ಅನಸೂಬಾಯಿ ಫಕಿರಪ್ಪ, ನಂದಿನಿ ಮಲ್ಲಿನಾಥ, ಗೌರಾಬಾಯಿ ಚವ್ಹಾಣ, ಅನೀತಾ, ತಾಲೂಕು ಅಧಿಕಾರಿಗಳಾದ ಶ್ರೀಮಂತ ಕೋಟ್ರೆ, ಅಂಬರೀಷ ಕಾಂಬ್ಳೆ, ಶ್ರೀಶೈಲ ಮುಚ್ಚಂಡಿ, ಡೊಂಗಲಚಂದ ನಾಯಕ್, ಈಶ್ವರ ಬ್ಯಾಡಗಿ, ಸರಳಾ ದೊಡ್ಮನಿ ಇದ್ದರು.