ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಫಜಲ್ಪುರ ವಕೀಲರಿಂದ ಕಲಾಪ ಬಹಿಷ್ಕಾರ

Rashmi Kasaragodu
Updated On : 12 Jan 2014, 1:06 am

ಅಫಜಲ್ಪುರ: ನಾಲ್ಕು ತಿಂಗಳ ಹಿಂದೆ ಹೈಕೋರ್ಟ್ ಪಿಎಫ್ ಅರ್ಜಿ ಅಫಜಲ್ಪುರದಲ್ಲೇ ತೆಗೆದುಕೊಳ್ಳಬೇಕೆಂದು ಆದೇಶ ಹೊರಡಿಸಿದ್ದರೂ ಈವರೆಗೂ ಈ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ವಕೀಲರು ಮತ್ತು ಕಕ್ಷಿದಾರರು ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದು ತಾಲೂಕು ವಕೀಲರ ಸಂಘ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿತು. ಪಿಎಫ್ ಕಾಪಿ 10ರಲ್ಲಿ ಆಗುವಂಥದ್ದು. ಆದರೆ ಸದ್ಯ 200 ಖರ್ಚು ಮಾಡಿ ಗುಲ್ಬರ್ಗಕ್ಕೆ ಹೋಗುವಂಥ ಪರಿಸ್ಥಿತಿ ಎದುರಾಗಿದೆ. ಪಿಎಫ್ ಕಾಪಿ ಅಫಜಲ್ಪುರದಲ್ಲೇ ಸಿಗುವಂತಹ ವ್ಯವಸ್ಥೆ ಮಾಡಬೇಕೆಂದು ನ್ಯಾ. ಜಿ.ಪ್ರಭಾವತಿ ಮತ್ತು ವಾಸುದೇವ ಗುಡಿ ಅವರಿಗೆ ವಕೀಲರ ಸಂಘ ಅಧ್ಯಕ್ಷ ರೆಜಿ ಪೂಜಾರಿ ಮನವಿ ಮಾಡಿದರು. ಎಸ್.ಎಸ್ ಪಾಟೀಲ್, ಎಫ್.ಎಂ ಇನಾಮದಾರ, ಎಸ್.ಕೆ ಪೂಜಾರಿ, ಆರ್.ಎಸ್. ಹೂಲ್ಲೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement