ಇಂದು ತುರ್ತು ಸಭೆ
ಗುಲ್ಬರ್ಗ: ಶರಣ ಹರಳಯ್ಯ ವಿವಿಧೋದ್ದೇಶ ಜಿಲ್ಲಾ ಸಮಾಜ ಸೇವಾ ಸಂಘದ ವತಿಯಿಂದ ನಗರದ ಹರಳಯ್ಯ ಸಮಾಜದ ವಿವಿಧ ಬಡಾವಣೆಯಲ್ಲಿನ ಸಮಾಜ ಸಂಘಟನೆಯ ಕಾರ್ಯಕರ್ತರಿಗೆ ಜ.12ರಂದು ಸಾಯಂಕಾಲ 5 ಗಂಟೆಗೆ ಮಹಾಂತ ನಗರದ ಬಸವ ಮಂಟಪದಲ್ಲಿ ತುರ್ತುಸಭೆ ಕರೆಯಲಾಗಿದೆ. ಈ ಸಭೆಗೆ ಹರಳಯ್ಯ ಸಮಾಜದ ವಿವಿಧ ಸಂಘಟನೆಯ ಮುಖಂಡರು, ಸಂಘದ ಪದಾಧಿಕಾರಿಗಳು ಭಾಗವಹಿಸಬೇಕೆಂದು ಅಧ್ಯಕ್ಷ ಸೂರ್ಯಕಾಂತ ಚೌಧರಿ ಹಾಗೂ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಗೌಳಿ ತಿಳಿಸಿದ್ದಾರೆ.