ಇಂದು ಸಚಿವರೊಂದಿಗೆ ಸಂವಾದ
ಗುಲ್ಬರ್ಗ: ಹೈದ್ರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ವತಿಯಿಂದ ಗುಲ್ಬರ್ಗ ಮಹಾನಗರದ ಸಾರ್ವಜನಿಕರು ಎದುರಿಸುತ್ತಿರುವ ಮೂಲ ಸೌಲಭ್ಯಗಳ ಕುರಿತು ರಾಜ್ಯದ ಪೌರಾಡಳಿತ ಹಾಗೂ ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂರೊಂದಿಗೆ ಜ.12ರಂದು ಬೆ.11 ಗಂಟೆಗೆ ಐವಾನ್ ಶಾಹಿ ಅತಿಥಿಗೃಹದಲ್ಲಿ ಸಂವಾದ ಏರ್ಪಡಿಸಲಾಗಿದೆ. ಸಂವಾದದಲ್ಲಿ ನಗರದ ವಿವಿಧ ಬಡಾವಣೆಗಳ ಜನತೆ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಕುರಿತು ಮುಕ್ತ ಸಂವಾದ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ವಕ್ತಾರ ನಾಗಲಿಂಗಯ್ಯ ಮಠಪತಿ ತಿಳಿಸಿದ್ದಾರೆ.
ಇಂದು ಮಾಸಪತ್ರಿಕೆ ಬಿಡುಗಡೆ
ಗುಲ್ಬರ್ಗ: ಹೈ-ಕ ಸ್ವಾಭಿಮಾನ ಮಾಸಪತ್ರಿಕೆ ಬಿಡಗುಡೆ ಸಮಾರಂಭವು ಜ.12ರಂದು ಬೆ.10.30ಕ್ಕೆ ಬೀದರಿನ ಬಿವಿಬಿ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಭಾಲ್ಕಿ ಸಂಸ್ಥಾನ ಮಠದ ಡಾ. ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೈ-ಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಸವರಾಜ್ ಜಾಬಶೆಟ್ಟಿ ಅಧ್ಯಕ್ಷತೆ ವಹಿಸಿದರು. ಹೈ-ಕ ಹೋರಾಟದ ನೇತಾರ ವೈಜನಾಥ ಪಾಟೀಲ್ ಮಾಸಪತ್ರಿಕೆ ಬಿಡುಗಡೆ ಮಾಡುವರು. ಶಿವಶರಣಪ್ಪ ವಾಲಿ, ಸಿ.ಎಸ್. ಪಾಟಿಲ್, ವೀರೇಂದ್ರ ಸಿಂಪಿ, ದೇಶಾಂಶ ಹುಡುಗಿ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಗುಲ್ಬರ್ಗ: ಬಿದಿರು ಕಾಯಕದ ಪರಿಶಿಷ್ಟ ಪಂಗಡ ಮೇದಾರ ಸಮಾಜದ ಸಂಘ ರಚನೆಯ ಪ್ರಕ್ರಿಯೆ ವೆಂಕಟೇಶ್ವರ ಯರಗೋಳ ಕಲ್ಯಾಣ ಮಂಟಪದಲ್ಲಿ ಜ.19ರಂದು ಬೆ.9ಗಂಟೆಗೆ ಸಮಾವೇಶ ನಡೆಯಲಿದೆ ಎಂದು ಮುಖ್ಯ ಸಂಚಾಲಕ ಭೀಮಣ್ಣ ಬೋನಾಳ ಮತ್ತು ಉಪ ಸಂಚಾಲಕ ಬಸವರಾಜ ಎಸ್. ಯರಗೋಳ ತಿಳಿಸಿದ್ದಾರೆ. 2014ರಿಂದ 2017ರ ವರೆಗಿನ ಮೂರು ವರ್ಷದ ಅವಧಿಗಾಗಿ ಹೈ-ಕ ಮೇದಾರ ಪರಿಶಿಷ್ಟ ಪಂಗಡ ಗಿರಿಜನಾಂಗ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದರು.