ಗೋಗಿ ಪೇಠ; ಬನಶಂಕರಿ ಜಾತ್ರಾ ಮಹೋತ್ಸವ
ಶಹಾಪುರ: ತಾಲೂಕಿನ ಗೋಗಿ ಪೇಠ ಗ್ರಾಮದಲ್ಲಿ ಶ್ರೀಬನಶಂಕರಿ ದೇವಿ ಜಾತ್ರಾ ಮಹೋತ್ಸವ 11ರಿಂದ 17ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಾನ್ನಿಧ್ಯವನ್ನು ಚಿಕ್ಕರೇವಣಸಿದ್ದ ಶಿವಶರಣರು ವಹಿಸಲಿದ್ದಾರೆ. ಸಹಯೋಗವನ್ನು ಯೋಗಗುರು ಜಯದೇವ ಸ್ವಾಮಿ ನೀಡಲಿದ್ದಾರೆ. ದಿನನಿತ್ಯ ವಿಶೇಷ ಪೂಜೆ ಪ್ರವಚನಗಳು ಮತ್ತು 16ರಂದು ಬೆಳಗ್ಗೆ ಬನಶಂಕರಿದೇವಿ ಗಂಗಾಸ್ನಾನ ಹಾಗೂ ಕುಂಭೋತ್ಸವ ಸಾಯಂಕಾಲ 6 ಗಂಟೆಗೆ ರಥೋತ್ಸವ ಮರುದಿನ 17ರಂದು ಜಂಗಿ ಕುಸ್ತಿಗಳು ನಡೆಯುವವು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಬನಂಶಕರಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಗೋಗಿಯ ಸಕಲ ಸದ್ಭಕ್ತಮಂಡಳಿ ಮನವಿ ಮಾಡಿದ್ದಾರೆ.