ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಾಲ್ಕು ದಿನ ಕಳೆದರೂ ಪ್ರಜ್ಞೆ ಮರಳಿಲ್ಲ

Rashmi Kasaragodu
Updated On : 12 Jan 2014, 1:08 am

ಗುಲ್ಬರ್ಗ: ಪಾತಕಿ ಮುನ್ನಾ ಜೊತೆ ಮುಖಾಮುಖಿಯಾಗಿ ಗುಂಡಿನ ಕಾಳಗದಲ್ಲಿ ತೀವ್ರ ಗಾಯಗೊಂಡಿರುವ ಸ್ಟೇಷನ್ ಬಜಾರ್ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ದೇಹಸ್ಥಿತಿ ಇನ್ನೂ ಗಂಭೀರವಾಗಿದೆ.
ತೀವ್ರ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಅವರನ್ನು ಉಳಿಸಿಕೊಳ್ಳಲು ಹೈದ್ರಾಬಾದ್ನ ಯಶೋಧರಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಯತ್ನಗಳು ಸಾಗಿವೆಯಾದರೂ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡಿಲ್ಲ.
ಕೃತಕ ಉಸಿರಾಟ, ವೆಂಟಿಲೇಟರ್ ವ್ಯವಸ್ಥೆಯಲ್ಲೇ ಬಂಡೆ ಮುಂದುವರಿದಿದ್ದರಿಂದ ಬಂಧುಗಳು ಆತಂಕಗೊಂಡಿದ್ದಾರೆ. ಹೈದ್ರಾಬಾದ್ನ ಯಶೋಧರಾ ಆಸ್ಪತ್ರೆಯ ನರರೋಗ ತಜ್ಞ ಡಾ. ರಂಗನಾಥಂ ನೇತೃತ್ವದ ತಜ್ಞ ವೈದ್ಯರ ತಂಡ ಬಂಡೆ ಅವರಿಗೆ ಚಿಕಿತ್ಸೆ ನೀಡುತ್ತಿದೆ.
ತಜ್ಞರು ಬಯಸಿದರೆ ಬಂಡೆ ಅವರನ್ನು ದೇಶೀಯವಾಗಿ ಹೆಚ್ಚಿನ ಸವಲತ್ತಿರುವ ಯಾವುದೇ ಆಸ್ಪತ್ರೆಗೆ ಅಥವಾ ಅಗತ್ಯ ಕಂಡಲ್ಲಿ ವಿದೇಶಕ್ಕೂ ಕರೆದೊಯ್ದು ಚಿಕಿತ್ಸೆ ಕೊಡಿಸಲು ಸರ್ಕಾರ ಸಿದ್ಧ ಎಂದು ಗೃಹ ಸಚಿವ ಜಾರ್ಜ್ ಹೈದ್ರಾಬಾದ್ಗೆ ಭೇಟಿ ನೀಡಿದಾಗ ಹೇಳುವ ಮೂಲಕ ಸರ್ಕಾರದ ಸಹಾಯಹಸ್ತ ಚಾಚಿದ್ದಾರೆ.
ಎಲ್ಲ ಅವಕಾಶಗಳು ಮುಕ್ತ: ಬಂಡೆ ಅವರಿಗೆ ಉತ್ತಮ ಚಿಕಿತ್ಸೆ ದೊರಕಿಸಿ ಅವರ ಆರೋಗ್ಯ ಸುಧಾರಣೆಯಾಗುವಂತೆ ಮಾಡುವುದೇ ಇಲಾಖೆಯ ಪ್ರಥಮಾದ್ಯತೆ. ಯಾವುದೇ ಶಂಕೆ ಬೇಡ. ಗುಲ್ಬರ್ಗದಿಂದಲೇ ಬಂಡೆ ಅವರನ್ನು ಹೆಲಿಕಾಪ್ಟರ್, ವಿಮಾನ ಬಳಸಿ ತುರ್ತು ಚಿಕಿತ್ಸೆಗೆ ಕರೆದೊಯ್ಯುವ ಚಿಂತನೆ ನಡೆಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದಕ್ಕಾಗಿ ಭಾರತ ವಾಯುಯಾನ ನಿರ್ದೇಶನಾಲಯದಿಂದ ಅನುಮತಿ ಪಡೆಯಲಾಗಿತ್ತು. ಹೈದ್ರಾಬಾದ್ನ ನರರೋಗ ತಜ್ಞ ಡಾ. ರಂಗನಾಥಂ ಅವರ ಸೂಚನೆಯಂತೆ ಗುಲ್ಬರ್ಗದ ವೈದ್ಯರಾದ ಡಾ. ಶಶಾಂಕ ರಾಮದುರ್ಗ, ಡಾ. ಸಂತೋಷ ತಂಡ ಬಸವೇಶ್ವರ ಆಸ್ಪತ್ರೆಯಲ್ಲೇ ಉತ್ತಮ ಚಿಕಿತ್ಸೆ ನೀಡಿದ್ದರಿಂದ ಹಾಗೂ ರಕ್ತದೊತ್ತಡದಲ್ಲಿ ಏರಿಳಿತವಿದೆ, ಸ್ಥಳಾಂತರ ತುಂಬ ಅಪಾಯಕಾರಿ ಎಂದಾಗ ಈ ಕ್ರಮ ಕೈಬಿಡಲಾಯ್ತು ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ(ಕಾನೂನು- ಸುವ್ಯವಸ್ಥೆ) ಎಂ.ಎಸ್. ರೆಡ್ಡಿ ತಿಳಿಸಿದ್ದಾರೆ.


ವಿದೇಶಕ್ಕೆ ಒಯ್ಯಬೇಕ್ರಿ
ಬಂಡೆ ದೇಹಸ್ಥಿತಿ ಹೈದ್ರಾಬಾದ್ನಲ್ಲಿಯೂ ಹಾಗೇ ಇದೆ. ವಿದೇಶಕ್ಕೆ ಕರೆದೊಯ್ಯುದೇ ವಾಸಿ. ಇಲ್ಲದೆ ಹೋದಲ್ಲಿ ಇನ್ನೂ ವಿಷಮಿಸಿದರೆ ಹೇಗೆ ತಜ್ಞ ವೈದ್ಯರ ತಂಡ ಬೇಗ ಈ ವಿಷಯದಲ್ಲಿ ತೀರ್ಪು ಹೇಳಬೇಕು. ಹಿರಿಯ ಪೊಲೀಸ್ ಅಧಿಕಾರಿಗಳು ಬಂಡೆ ಕುಟುಂಬ ವರ್ಗದ ಜೊತೆ ನಿಲ್ಲಬೇಕು. ಪಾಕಿಸ್ತಾನದ ಮಲಾಲ ಪ್ರಕರಣದಲ್ಲಾದಂತೆ ಬಂಡೆ ಅವರಿಗೂ ವಿದೇಶಕ್ಕೆ ರವಾನಿಸಿ ಸೂಕ್ತ ಚಿಕಿತ್ಸೆ ದೊರಕಿಸಿಕೊಡಬೇಕು. ಕರ್ನಾಟಕ ಸರ್ಕಾರ ಈ ದಿಶೆಯಲ್ಲಿ ತಕ್ಷಣ ಮುಂದುವರಿಯಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement