ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಿಎಸ್ಐ ಬಂಡೆಗೆ ಉನ್ನತ ಚಿಕಿತ್ಸೆ ಕೊಡಿಸಲು ಆಗ್ರಹ

Rashmi Kasaragodu
Updated On : 12 Jan 2014, 1:06 am

ಅಫಜಲ್ಪುರ: ರೌಡಿ ಜೊತೆಗಿನ ಕಾಳಗದಲ್ಲಿ ಗಾಯಗೊಂಡು ಸಾವು- ಬದುಕಿನ ಹೋರಾಟದಲ್ಲಿರುವ ಪಿಎಸ್ಐ ಬಂಡೆ ಅವರಿಗೆ ಉನ್ನತ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯಬೇಕೆಂದು ಜೈಕರವೇ ಸಂಘಟನೆ ಸರ್ಕಾರಕ್ಕೆ ಆಗ್ರಹಿಸಿದೆ. ಅಲ್ಲದೆ, ಬಂಡೆ ಉತ್ತಮ ಆರೋಗ್ಯಕ್ಕೆ ಆಗ್ರಹಿಸಿ ಹನುಮಾನ್ ಮಂದಿರದಲ್ಲಿ ಪೂಜೆ- ಅಭಿಷೇಕ ನಡೆಸಿದೆ. ಅಫಜಲ್ಪುರ ಠಾಣೆ ಪೊಲೀಸರು ಪೂಜೆಯಲ್ಲಿ ಭಾಗವಹಿಸಿದ್ದರು. ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನೆಯ ಮುಖಾಂತರ ತೆರಳಿ ತಹಸೀಲ್ದಾರ್ ಗೌಸುದ್ದೀನ್ ಅವರಿಗೆ ಮನವಿ ಸಲ್ಲಿಸಿದೆ. ಮಹಾಂತೇಶ, ಮಲ್ಲು ಬೆಟ್ಟಜೇವರ್ಗಿ, ಗೌರಿಶಂಕರ ಹೆಗ್ಗಿ, ನಾರಾಯಣ, ವಿವೇಕ ಮಣೂರ, ಚನ್ನಬಸು ಬಡದಾಳ, ಮಂಜುನಾಥ ತೆನ್ನಳ್ಳಿ, ಚನ್ನಪ್ಪ ತೆನ್ನಳ್ಳಿ, ಹಣಮಂತ ಮ್ಯಾಳೇಶಿ, ಶ್ರೀಕಾಂತ ಮಾವುರ, ಯಲ್ಲಾಲಿಂಗ, ಮೈಬೂಬ ಮುಲ್ಲಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement