ಪುರಾಣ ಕಾರ್ಯಕ್ರಮ
ಗುಲ್ಬರ್ಗ: ಆಳಂದ ತಾಲೂಕಿನ ನರೋಣ ಗ್ರಾಮದಲ್ಲಿ ಜ.12ರಂದು ಸಂಜೆ 8ಕ್ಕೆ ಚನ್ನವೀರ ವಿವಿಧೋದ್ದೇಶ ಸಮಾಜ ಸಂಘದ ವತಿಯಿಂದ ಪುರಾಣ ನಡೆಯಲಿದೆ. ಸೊನ್ನಾಲಿಗೆ ಸಿದ್ದರಾಮೇಶ್ವರ ಸಂಗೋಳಗಿ ಪುರಾಣದ ಕಾರ್ಯಕ್ರಮ ಉದ್ಘಾಟಿಸುವರು. ಬಬಲಾದಿ ಗುರಪಾದಲಿಂಗ ಹಾಗೂ ಮಹಾಂತ್ರಶ್ರೀಗಳು ಸಾನ್ನಿಧ್ಯ ವಹಿಸುವರು. ಗ್ರಾಮದ ಗಣ್ಯರಿಗೆ ಸನ್ಮಾನ ಹಾಗೂ ಶಾರದಾ ವಿದ್ಯಾಲಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹಣಮಂತರಾವ್ ವಿ. ಗೋಳಾ ತಿಳಿಸಿದ್ದಾರೆ.
ದತ್ತಿ ಉಪನ್ಯಾಸ
ಗುಲ್ಬರ್ಗ: ಕಲ್ಬುರ್ಗಿ ಬಸವ ಸಮಿತಿ ವತಿಯಿಂದ ಲಿಂ. ಲಕ್ಷ್ಮಮ್ಮ ಗೌಡ್ತಿ ಮತ್ತು ಲಿ. ರಾಚಣಗೌಡ ಮುದ್ನಾಳ ಸ್ಮರಣಾರ್ಥ ಜ.12ರಂದು ಸಾಯಂಕಾಲ 6ಕ್ಕೆ ಕುಸುನೂರು ರಸ್ತೆಯ ಡಾಕ್ಟರ್ಸ್ ಕಾಲೋನಿಯ ಅನುಭವಮಂಟಪದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಗನಬಸವಣ್ಣನವರು ಸಾನ್ನಿಧ್ಯ ವಹಿಸಲಿದ್ದಾರೆ. ಹಿರಿಯ ನ್ಯಾಯವಾದಿ ವಿಜಯಕುಮಾರ ಹೆರೂರ ಅಧ್ಯಕ್ಷತೆ ವಹಿಸುವರು. ವಿ.ಜಿ. ವುಮೆನ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಶಾಂತಾಮಠ ಶರಣರ ಅರುಹು ಕುರುಹಿನ ಪರಿಕಲ್ಪನೆ ಕುರಿತು ಉಪನ್ಯಾಸ ನೀಡಲಿದ್ದಾರೆ.