ಪೊಲೀಸರ ಮೇಲೆ ಗುಂಡಿನ ದಾಳಿ: ಎಬಿವಿಪಿ ಪ್ರತಿಭಟನೆ
ಕ.ಪ್ರ. ವಾರ್ತೆ ಸುರಪುರ ಜ.11
ಗುಲ್ಬರ್ಗದಲ್ಲಿ ಪಾತಕಿಯೊಬ್ಬ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆಯನ್ನು ಅಖಿಲ ಭಾರತೀಯ ವಿದ್ಯಾಥರ್ ಪರಿಷತ್ ಖಂಡಿಸಿದೆ.
ಮಿನಿ ವಿಧಾನಸೌಧದಲ್ಲಿ ಎಬಿವಿಪಿ ಕಾರ್ಯಕರ್ತರು ಗುಂಡಿನ ದಾಳಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮುಖಂಡರು ಮಾತನಾಡಿ, ಪಾತಕಿಯೊಬ್ಬ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದು ಖಂಡನೀಯ. ಸಾರ್ವಜನಿಕರ ರಕ್ಷಣೆಗೆ ಸ್ಪಂದಿಸುವ ಪೊಲೀಸರಿಗೆ ರಕ್ಷಣೆ ಇಲ್ಲದಿರುವುದು ಸರಿಯಲ್ಲ ಎಂದರು.
ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ಪೊಲೀಸರಿಗೆ ಉತ್ತಮ ಚಿಕಿತ್ಸೆ ದೊರಕಿಸಿಕೊಡಬೇಕು. ಪೊಲೀಸರಿಗೆ ಅಧುನಿಕ ಶಸ್ತ್ರಾಸ್ತ್ರ ಒದಗಿಸಬೇಕು. ಪಾತಕಿಗಳು ನುಸುಳದಂತೆ ತೀವ್ರ ನಿಗಾ ವಹಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮನವಿ: ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಮನವಿ ಸ್ವೀಕರಿಸಿದರು. ಮುಖಂಡರಾದ ಲಕ್ಷ್ಮೀಕಾಂತ ದೇವರಗೋನಾಲ, ವೀರೇಶ ರೆಡ್ಡಿ ಕೋನ್ಹಾಳ, ಶರಣು ನಾಯಕ, ರವಿ ಚಿಕ್ಕನಳ್ಳಿ, ಜಗದೀಶ ಶೆಳ್ಳಿಗಿ, ಕೊಟ್ರೇಶ ಅರಳಹಳ್ಳಿ, ಶ್ರವಣ ಅರಳಹಳ್ಳಿ, ಭೀಮು ಮಾಚಗುಂಡಾಳ, ಸುರೇಶ ಖಾನಾಪುರ, ಶರಣು ಸುರಪುರ, ಚೇತನ ವಿಶ್ವಕರ್ಮ, ನಿಂಗಣ್ಣ ಮಾಚಗುಂಡಾಳ, ಶ್ರೀನಿವಾಸ ಸಿದ್ದಾಪುರ, ಮಲ್ಲನಗೌಡ ಮಾಚಗುಂಡಾಳ, ಗೌತಮ ವಾಗಣಗೇರಿ, ಸುಭಾಷ ಹುಲಕಲ್, ಮಾನು ನಾಯಕ, ಭೀಮು ಗುಡಾಳಕೇರಿ, ಅಂಬರೀಶ ಕಿರದಳ್ಳಿ ಇನ್ನಿತರರಿದ್ದರು.