ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬ್ಯಾಟರಿ ರಿಪೇರಿ, ಸರ್ವಿಸ್ ತರಬೇತಿಗೆ ಅರ್ಜಿ ಆಹ್ವಾನ

Rashmi Kasaragodu
Updated On : 12 Jan 2014, 1:07 am

ಯಾದಗಿರಿ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಗುಲ್ಬರ್ಗ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ(ಸಿಡಾಕ್) ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬ್ಯಾಟರಿ ರಿಪೇರಿ ಮತ್ತು ಸರ್ವೀಸಿಂಗ್ ಹಮ್ಮಿಕೊಳ್ಳಲಾಗಿದೆ. 4 ವಾರಗಳ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಆಸಕ್ತರು ಪಾಲ್ಗೊಳ್ಳಬಹುದಾಗಿದೆ. ಜನವರಿ 3ನೇ ವಾರದಿಂದ ಸುರಪುರದಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ. 18ರಿಂದ 40 ವರ್ಷ ವಯೋವುತಿಯುಳ್ಳ, ಕನಿಷ್ಟ ಎಸ್ಎಸ್ಎಲ್ಸಿ ಪಾಸಾದ ಆಸಕ್ತರು ಬಿಳಿಹಾಳೆಯಲ್ಲಿ ತಮ್ಮ ಸ್ವ ವಿವರವುಳ್ಳ ಮಾಹಿತಿಯೊಂದಿಗೆ ವಯಸ್ಸಿನ ದಾಖಲೆ(ಎಸ್ಎಸ್ಎಲ್ಸಿ ಮಾರ್ಕ್ಸ್ಕಾರ್ಡ್), ವಾಸಸ್ಥಳಕ್ಕೆ ರೇಷನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರಗಳೊಂದಿಗೆ ಜ. 18 ರಂದು ಜಿಲ್ಲಾ ಉಪನಿರ್ದೇಶಕರು (ತರಬೇತಿ) ಸಿಡಾಕ್, ಕೇರ್ ಆಫ್ ಸಮುದಾಯ ಸಂಘಟನಾಧಿಕಾರಿ, ನಗರಸಭೆ ಕಾರ್ಯಾಲಯ, ಕೆಎಸ್ಆರ್ಟಿಸಿ ಬಸ್ ಸ್ಟಾಂಡ್ ಹತ್ತಿರ, ಸುರಪುರ ಇಲ್ಲಿಗೆ ಅರ್ಜಿ ಸಲ್ಲಿಸಲು ತಿಳಿಸಿದೆ. ವಿವರಕ್ಕೆ ಮೊ.96209 10554 ಇಲ್ಲಿಗೆ ಸಂಪರ್ಕಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement