ರೇಲ್ವೆ ಕೋಚ್- ಕೌಶಲ್ಯ ಅಭಿವೃದ್ಧಿ ಕೇಂದ್ರ; ಸ್ವಾಗತ
ಶಹಾಬಾದ್: ಯಾದಗಿರಿ ಜಿಲ್ಲೆಯ ಸೈದಾಪುರ ಬಳಿ 775 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರೇಲ್ವೆ ಬೋಗಿ ಕಾರ್ಖಾನೆ ಹಾಗೂ ಶಹಾಬಾದ್ ನಗರದಲ್ಲಿ 100 ಕೋಟಿ ಅನುದಾನದಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ ಕುರಿತ ಕೇಂದ್ರ ಸರ್ಕಾರದ ನಿರ್ಣಯಕ್ಕೆ ನಗರದ ಗಣ್ಯರಿಂದ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ. ಬ್ಲಾಕ್ ಅಧ್ಯಕ್ಷ ಡಾ. ಎಂ.ಎ. ರಶೀದ್ ಕೇಂದ್ರ ಸಚಿವ ಖರ್ಗೆ ಅವರಿಗೆ ಪತ್ರ ಬರೆದು, ಸೈದಾಪುರದಲ್ಲಿ ಕೋಚ್ ಕಾರ್ಖಾನೆ ಆರಂಭಿಸುತ್ತಿರುವುದು ಹಾಗೂ ನಗರದಲ್ಲಿ ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆಯಿಂದ ಸ್ಥಾಪಿಸಲಾಗುವ ಕೌಶಲ್ಯಾಭಿವೃದ್ಧಿ ಕೇಂದ್ರ(ಸ್ಕಿಲ್ ಡೆವಲಪ್ಪೆಂಟ್ ಸೆಂಟರ್ ಸ್ಥಾಪನೆಯ ನಿರ್ಣಯ ಸ್ವಾಗತಾರ್ಹ ಎಂದಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸಂತೋಷ ಇಂಗಿನಶೆಟ್ಟಿ, ನಿರಂಜನ ಗೊಳೇದ, ವಿಜಯಕುಮಾರ ಮುತ್ತಟ್ಟಿ, ಯಾಕೂಬ ಮರ್ಚೆಂಟ್, ಮೃತ್ಯುಂಜಯ ಹಿರೇಮಠ, ಮೆಹಮೂದ್ಖಾನ್ ಮಸಾಲೆವಾಲ, ನಿಂಗಣ್ಣ ದೇವಕರ್, ಸುರೇಶ ನಾಯಕ್, ಅನ್ವರ್ಪಾಶಾ ನಸೀರುದ್ದೀನ್, ಇಬ್ರಾಹಿಂಖಾನ್ ನಾಗೂರೆ, ಎಂ.ಎ. ಜಲೀಲ್ ಇತರರು ಪತ್ರಕ್ಕೆ ಸಹಿ ಹಾಕಿದ್ದಾರೆ.