ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಲಾರಿ ಮಾಲೀಕರು, ಏಜೆಂಟರ ಪ್ರತಿಭಟನೆ

Rashmi Kasaragodu
Updated On : 12 Jan 2014, 1:09 am

ಗುಲ್ಬರ್ಗ: ಫೆಡರೇಷನ್ ಆಫ್ ಸ್ಟೇಟ್ ಲಾರಿ ಓನರ್ಸ್ ಆ್ಯಂಡ್ ಏಜೆಂಟ್ ಅಸೋಷಿಯೇಷನ್ರವರಿಗೆ ಬೆಂಬಲ ವ್ಯಕ್ತಪಡಿಸಲು ಗುಲ್ಬರ್ಗ ಲಾರಿ ಮಾಲೀಕರ ಸಂಘದ ವತಿಯಿಂದ ಜ.11ರ ಮಧ್ಯರಾತ್ರಿಯಿಂದ ಅನಿರ್ದಿಷ್ಟ ಅವಧಿವರೆಗೆ ಲಾರಿ ಮುಷ್ಕರ ಕೈಗೊಂಡು ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ನೂತನ ಮರಳು ನೀತಿ ರದ್ದುಪಡಿಸಬೇಕು, ಚಾಲಕರಿಗೆ 8ನೇ ತರಗತಿ ಕಡ್ಡಾಯಗೊಳಿಸಿರುವುದನ್ನು ರದ್ದುಪಡಿಸಬೇಕು. ಪ್ರವಾಸಿ ವಾಹನಗಳಿಗೆ ವಾರ್ಷಿಕ ತೆರಿಗೆ ಹಿಂತೆಗೆಯಬೇಕು. ಟ್ರಾನ್ಸಿಟ್ ಪಾಸ್ ರದ್ದುಗೊಳಿಸಬೇಕು. ಇ-ಸುಗಮ ಅವಧಿ ಕನಿಷ್ಠ 30 ದಿನಕ್ಕೆ ವಿಸ್ತರಿಸಬೇಕೆಂಬುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸಲು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಮೂಲ ಅವಶ್ಯಕತೆಗಳಾದ ಹಾಲು, ತರಕಾರಿ, ಔಷಧ ಲಾರಿಗಳನ್ನು ಹೊರತುಪಡಿಸಿ ಎಲ್ಲ ವಾಣಿಜ್ಯ ವಾಹನಗಳು ಸ್ವಯಂ ಪ್ರೇರಿತರಾಗಿ ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement