ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

30ರಂದು ನಾಲವಾರ ಜಾತ್ರೆ

Lingaraj Badiger
Updated On : 13 Jan 2014, 11:18 am

ಶಹಾಬಾದ್: ಕ್ಷೇತ್ರದ ಸುಪ್ರಸಿದ್ದ ಕೋರಿಸಿದ್ದೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಜ.30 ರಿಂದ ಪೀಠಾಧಿಪತಿ ಡಾ. ಸಿದ್ದತೋಟೆಂದ್ರ ಶ್ರೀಗಳ ಪಾವನ ಸನ್ನಿಧಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಶ್ರೀಮಠದ ಮಹಾದೇವ ಗಂವ್ಹಾರ ತಿಳಿಸಿದ್ದಾರೆ. ಜಾತ್ರೆ ನಿಮಿತ್ತ ಜ.19 ರಿಂದ 30 ರವರೆಗೆ ಪ್ರತಿದಿನ ರಾತ್ರಿ 8 ಗಂ. ಶಿವಾನುಭವ ಮಂಟಪದಲ್ಲಿ ಕೋರಿಸಿದ್ದೇಶ್ವರ ಶಿಕ್ಷಣ ಸಂಸ್ಥೆ ಶಾಲಾ, ಕಾಲೇಜು ಮಕ್ಕಳಿಂದ ವಚನಗಾಯನ, ಜನಪದ ನೃತ್ಯ, ಹಾಸ್ಯ ಸಂಚೆ ನಡೆಯಲಿದೆ. ಜ.30ರಂದು ರಾತ್ರಿ 7ಕ್ಕೆ ಶ್ರೀಗಳ ಸನ್ನಿಧಾನದಲ್ಲಿ ಹರಗುರುಚರಮೂರ್ತಿಗಳ ಸಮ್ಮುಖದಲ್ಲಿ ಜಾತ್ರಾ ಮಹೋತ್ಸವದ ಉದ್ಘಾಟನೆ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಐದು ವ್ಯಕ್ತಿಗಳಿಗೆ ಶ್ರೀಮಠದಿಂದ ಪ್ರಥಮ ಬಾರಿಗೆ 'ಸಿದ್ದತೋಟೆಂದ್ರ ಪಂಚರತ್ನ' ಪ್ರಶಸ್ತಿ ಪ್ರಧಾನ ನಡೆಯುವುದು. ಅವರಾತ್ರಿ ಅಮವಾಸ್ಯೆ ನಿಮಿತ್ತ ಮಧ್ಯರಾತ್ರಿ ಭಕ್ತರ ಹರಕೆಯ ತನಾರತಿ ಮಹೋತ್ಸವ ನಡೆಯಲಿದೆ. ಜ.30 ರಂದು ಸಂಜೆ 6ಕ್ಕೆ ಶಿವಯೋಗಿ ಕೋರಿಸಿದ್ದೇಶ್ವರರ ಭವ್ಯ ರಥೋತ್ಸವ, ನಡೆಯಲಿದೆ. ರಾತ್ರಿ 8ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

ಕೌಶಲ್ಯಾಭಿವೃದ್ಧಿ ಕೇಂದ್ರ: ಸ್ವಾಗತ
ಶಹಾಬಾದ್: ಯಾದಗಿರಿ ಜಿಲ್ಲೆಯ ಇಲ್ಲಿಗೆ ಸಮೀಪದ ಸೈದಾಪುರ ಗ್ರಾಮದ ಬಳಿ 775 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರೇಲ್ವೆ ಬೋಗಿ ಕಾರ್ಖಾನೆ ಹಾಗೂ ಶಹಾಬಾದ್ ನಗರದಲ್ಲಿ 100 ಕೋಟಿ ಅನುದಾನದಲ್ಲಿ ಕೌಶಲ್ಯಾಭೀವೃದ್ಧಿ ಕೇಂದ್ರ ಸ್ಥಾಪನೆ ಕುರಿತ ಕೇಂದ್ರ ಸರ್ಕಾರದ ನಿರ್ಣಯಕ್ಕೆ ನಗರದ ಗಣ್ಯರಿಂದ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶಹಾಬಾದ್ ಬ್ಲಾಕ್ ಅಧ್ಯಕ್ಷ ಡಾ. ಎಂ.ಎ.ರಶೀದ್, ಖರ್ಗೆ ಅವರಿಗೆ ಪತ್ರ ಬರೆದು ಸೈದಾಪುರದಲ್ಲಿ ಕೋಚ್ ಕಾರ್ಖಾನೆ ಆರಂಭಿಸುತ್ತಿರುವುದು ಹಾಗೂ ನಗರದಲ್ಲಿ ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆಯಿಂದ ಸ್ಥಾಪಿಸಲಾಗುವ ಕೌಶಲ್ಯಾಭೀವೃದ್ಧಿ ಕೇಂದ್ರ ಸ್ಥಾಪನೆಯ ನಿರ್ಣಯ ಸ್ವಾಗತಾರ್ಹ. ಆ ಮೂಲಕ ಹಿಂದುಳಿದ ಈ ಭಾಗದ ಜನತೆಗೆ ಉದ್ಯೋಗ ಮತ್ತು ಪ್ರದೇಶದ ಅಭಿವೃದ್ಧಿ ಸಾಧ್ಯ. ನಿರ್ಣಯಕ್ಕೆ ಕೇಂದ್ರ ಸರ್ಕಾರ ಹಾಗೂ ಖರ್ಗೆ ಅವರನ್ನು ಅಭಿನಂದಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸಂತೋಷ ಇಂಗಿನಶೆಟ್ಟಿ, ನಿರಂಜನ ಗೊಳೇದ, ವಿಜಯಕುಮಾರ  ಮತ್ತಿತರರು ಪತ್ರಕ್ಕೆ ಸಹಿ ಹಾಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement