ವಿವೇಕಾನಂದರು ಮಹಾನ್ ಚೇತನ: ಸಾಯಿಬಣ್ಣ ಪುರ್ಲ
ಸುರಪುರ: ರಾಷ್ಟ್ರದ ಹಿರಿಮೆ ಸಾರಿದ ವಿವೇಕಾನಂದರು ಭಾರತೀಯರಲ್ಲಿ ಆತ್ಮವಿಶ್ವಾಸ ತುಂಬಿದ ಮಹಾನ್ ಚೇತನ ಎಂದು ಸುದೀಪ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಾಯಿಬಣ್ಣ ಪುರ್ಲ ಹೇಳಿದರು.
ಸಮೀಪದ ರಂಗಂಪೇಟೆಯ ಸುದೀಪ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 152ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಮಾತನಾಡಿ, ಅಧ್ಯಾತ್ಮ ಸಾಧನೆ ಮೂಲಕ ರಾಷ್ಟ್ರದ ಘನತೆಯನ್ನು ವಿಶ್ವಕ್ಕೆ ಪರಿಚಯಿಸಿ, ಯುವ ಜನತೆಗೆ ಮಾದರಿಯಾಗಿ ಪ್ರಜ್ವಲಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದರು. ಶಾಲೆಯ ಶಿಕ್ಷಕರಾದ ಬೀರಪ್ಪ, ರಾಜೇಶ್ವರಿ ಯಾದವ, ರಾಜೇಶ್ವರಿ ಕೊಳ್ಳದ, ಶಶಿಕಲಾ, ಅನುಶ್ರೀ, ಲಕ್ಷ್ಮೀ, ಶೃತಿ, ಸಹೀರಾಬಾನು, ಮಾಸಿಂಬ್ ಇದ್ದರು. ವಿವೇಕಾನಂದರ ಛದ್ಮ ವೇಷದಾರಿ ಬಾಲಕ ಎಲ್ಲರ ಗಮನ ಸೆಳೆದರು.