ಕೆಂಭಾವಿ: ಸಿದ್ದರಾಮೇಶ್ವರ ಜಯಂತ್ಯುತ್ಸವ ಆಚರಣೆ
ಕೆಂಭಾವಿ: ಶಿವಯೋಗಿ ಸಿದ್ದರಾಮೇಶ್ವರ 841ನೇ ಜಯಂತ್ಯುತ್ಸವವನ್ನು ಪಟ್ಟಣದ ಗ್ರಾಪಂ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಗ್ರಾಪಂ ಅಧ್ಯಕ್ಷೆ ಪದ್ಮಾವತಿ ದೇವರಮನಿ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಜೀವರಾವ ಕುಲಕರ್ಣಿ ಮಾತನಾಡಿ, ಬಸವಣ್ಣನವರ ಸಮಕಾಲೀನರಾದ ಸಿದ್ದರಾಮೇಶ್ವರರು ಹಿಂದುಳಿದ ಭೋವಿ ವಡ್ಡರ ಸಮಾಜಕ್ಕೆ ಸೇರಿದವರಾಗಿದ್ದರೂ ಅವರು ಯಾವುದೇ ಜಾತಿ ಜನಾಂಗವೆನ್ನದೆ ಎಲ್ಲ ಸಮಾಜದ ಏಳ್ಗೆಗಾಗಿ ದುಡಿದವರು. ಸರ್ಕಾರ ಇಂಥಾ ವ್ಯಕ್ತಿಯ ಜಯಂತಿಯನ್ನು ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.ಗ್ರಾಪಂ ಉಪಾಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ, ಸದಸ್ಯರಾದ ರಂಗಪ್ಪ ಮ್ಯಾಗೇರಿ, ಶರಣಪ್ಪ ವಡ್ಡರ, ಗ್ರಾಪಂ ಮಾಜಿ ಅಧ್ಯಕ್ಷ ಶಂಕರ ಮೋಪಗಾರ, ಹಳ್ಳೆಪ್ಪ ಬೈಲಮಡ್ಡಿ, ಭೀಮಣ್ಣ ಜೇವಗರ್, ಬಸವರಾಜ ಮ್ಯಾಗೇರಿ, ಸಾಯಬಣ್ಣ ಮ್ಯಾಗೇರಿ, ಗುರುನಾಥ, ರಮೇಶ ಚಿಂಚೋಳಿ, ಚಳಿಗೆಪ್ಪ, ವೆಂಕಟೇಶ, ರಂಗಣ್ಣ ಮೋಪಗಾರ ಸೇರಿದಂತೆ ಹಲವಾರು ಮುಖಂಡರುಗಳು ಭಾಗವಹಿಸಿದ್ದರು.