ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ತಿಂಥಣಿ ಜೈವಿಕ ಇಂಧನ ಉದ್ಯಾನ ಲೋಕಾರ್ಪಣೆ

Rashmi Kasaragodu
Updated On : 14 Jan 2014, 11:49 am

ಸುರಪುರ: ರಾಯಚೂರಿನ ಕೃಷಿ ವಿಶ್ವವಿದ್ಯಾಲಯ, ಹಟ್ಟಿ ಚಿನ್ನದ ಗಣಿ ಕಂಪನಿ ಹಾಗೂ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಜೈವಿಕ ಇಂಧನ ಉದ್ಯಾನವನ್ನು ಸಮಾಜ ಕಲ್ಯಾಣ ಸಚಿವ ಆಂಜನೇಯ ಸೋಮವಾರ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಯದಿಂದ ಹೊರತಂದ ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಬಿ.ವಿ. ಪಾಟೀಲ, ಹಟ್ಟಿ ಚಿನ್ನದ ಗಣಿ ಕಂಪನಿ ನಿ. ಹಾಗೂ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎ.ಕೆ. ಮೊನ್ನಪ್ಪ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರು ಹಾಗೂ ಪ್ರಧಾನ ಅನ್ವೇಷಕ ಡಾ. ಬಿ.ಎಸ್. ಜನಗೌಡರ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.
ಜೈವಿಕ ಇಂಧನ ಉದ್ಯಾನದ ವಿಶೇಷತೆಗಳು: ರಾಯಚೂರಿನ ಕೃಷಿ ವಿಶ್ವವಿದ್ಯಾಲಯ, ಹಟ್ಟಿ ಚಿನ್ನದ ಗಣಿ ಹಾಗೂ ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ಜೈವಿಕ ಇಂಧನ ಉದ್ಯಾನವನ್ನು ಸ್ಥಾಪಿಸಲಾಗಿದೆ.
ತಿಂಥಣಿ ಜೈವಿಕ ಇಂಧನ ಉದ್ಯಾನವು ರಾಜ್ಯದ 2ನೇ ಜೈವಿಕ ಇಂಧನ ಉದ್ಯಾನವಾಗಿದ್ದು, 2012-13ನೇ ಸಾಲಿನಲ್ಲಿ ಉತ್ತರ ಕರ್ನಾಟಕದ ಭಾಗಕ್ಕೆ ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಜೈವಿಕ ಇಂಧನ ಉದ್ಯಾನದ ಯೋಜನೆಯನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ 598 ಲಕ್ಷ ಮೊತ್ತದ ಯೋಜನೆ ಮಂಜೂರು ಮಾಡಲಾಯಿತು. ಈ ಯೋಜನೆಗೆ ಹಟ್ಟಿ ಚಿನ್ನದ ಗಣಿ ಕಂಪನಿ ತನ್ನ ಸ್ವಾಧೀನದಲ್ಲಿದ್ದ 42 ಎಕರೆ ತಾಮ್ರದ ಗಣಿ ಪ್ರದೇಶವನ್ನು ಸದ್ಬಳಕೆಗಾಗಿ 30 ವರ್ಷಗಳ ಭೋಗ್ಯದ ಒಡಂಬಡಿಕೆಯೊಂದಿಗೆ ರಾಯಚೂರಿನ ಕೃಷಿ ವಿಶ್ವವಿದ್ಯಾಲಯಕ್ಕೆ ನೀಡಲಾಗಿರುತ್ತದೆ. ಈ ಜೈವಿಕ ಇಂಧನ ಉದ್ಯಾನದ ಪೂರ್ಣ ಪ್ರಮಾಣದ ಅಭಿವೃದ್ಧಿ ಮಾಡುವ ಜವಬ್ದಾರಿಯನ್ನು ರಾಯಚೂರು ಕೃವಿವಿ ನೀಡಲಾಗಿದೆ. ಸದರಿ ವಿವಿ 5 ವರ್ಷಗಳ ಯೋಜನೆ ರೂಪಿಸಿ ಕಾರ್ಯ ಆರಂಭಿಸಲಾಗಿದೆ. ಉದ್ಯಾನದ ಭೂ ಪ್ರದೇಶದ ಅಭಿವೃದ್ಧಿ 4 ತಿಂಗಳಲ್ಲಿ ಪೂರ್ಣಗೊಳಿಸಿ 32 ಏಕರೆ ಪ್ರದೇಶದಲ್ಲಿ ಈಗಾಗಲೇ ಹಲವು ವಿವಿಧ ಜೈವಿಕ ಸಸಿಗಳ, ಮರಗಳ ತಾಕುಗಳನ್ನು ಮಾಡಲಾಗಿದೆ.
ಯಾದಗಿರಿ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ್, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಬಿ.ವಿ. ಪಾಟೀಲ, ರಾಯಚೂರು ಕೃಷಿ ವಿವಿಯ ಕುಲಸಚಿವ ಡಿ.ಪಿ. ಬಿರಾದಾರ್, ಸಂಶೋಧನಾ ನಿರ್ದೇಶಕ ಡಾ.ಬಿ.ಎಸ್. ಜನಗೌಡರ್, ವ್ಯವಸ್ಥಾಪಕ ಮಂಡಳಿಯ ಸದಸ್ಯೆ ಫಾತಿಮಾ, ಎಚ್.ಪಿ. ಖಾನ್ಸಾಬ್ ಇದ್ದರು.



ಜೈವಿಕ ಇಂಧನ ಧ್ಯೇಯೋದ್ದೇಶಗಳು
ಟಿ  ಸಂಶೋಧನೆ: ಹೈ-ಕ ಭಾಗದಲ್ಲಿ ಜೈವಿಕ ಇಂಧನ ಸಸ್ಯಗಳ ಪ್ರದೇಶವನ್ನು ಗುರುತಿಸುವುದು. ಗುಣಮಟ್ಟದ ಹಾಗೂ ಅಧಿಕ ಇಳುವರಿ ನೀಡುವ ಸಸಿಗಳನ್ನು ಬೆಳೆಸುವುದು. ಮುಂದೆ ರೈತರಿಗೆ ಉಚಿತ ಸಸಿಗಳ ವಿತರಣೆ, ಜೈವಿಕ ಇಂಧನ ಬಗ್ಗೆ ಸಂಶೋಧನೆ ಕೈಗೊಳ್ಳುವುದು.
ಟಿ  ತರಬೇತಿ: ಜೈವಿಕ ಇಂಧನ ಬೆಳೆಗಳ ಉತ್ಪಾದನೆ, ಮಾರುಕಟ್ಟೆ ಬಗ್ಗೆ ರೈತರಿಗೆ ಒಳ ಹಾಗೂ ಹೊರ ಆವರಣದ ತರಬೇತಿ ಹಾಗೂ ವಿದ್ಯಾರ್ಥಿಗಳಿಗೆ, ಅಧಿಕಾರಿಗಳಿಗೆ ಇದರ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
ಟಿ  ವಿಸ್ತರಣೆ: ಬರಡು ಭೂಮಿಯಲ್ಲಿ ಬೆಳೆಸಲು ಉಚಿತ ಸಸಿಗಳನ್ನು ನೀಡುವುದು. ಜೈವಿಕ ಇಂಧನ ಸ್ವಸಹಾಯ ಗುಂಪುಗಳನ್ನು ರಚಿಸುವುದು. ಜೈವಿಕ ಇಂಧನ ಮಾರುಕಟ್ಟೆ ಜಾಲ ನಿರ್ಮಾಣ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೃವಿವಿ, ರಾಯಚೂರಿನ ಸಂಶೋಧನಾ ನಿರ್ದೇಶಕ ಡಾ. ಬಿ.ಎಸ್. ಜನಗೌಡರ್ ನೇತೃತ್ವದಲ್ಲಿ ಈ ಒಂದು ಯೋಜನೆ ಸಾಗಿದ್ದು, ಈ ಭಾಗದ ರೈತರು ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ಇದರ ಲಾಭ ಪಡೆಯಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement