ಭೀ.ಗುಡಿ ಬಲಭೀಮೇಶ್ವರ ಜಾತ್ರೆ ಇಂದಿನಿಂದ
ಶಹಾಪುರ: ತಾಲೂಕಿನ ಭೀಮರಾಯನಗುಡಿ(ಅಮಲಾಪುರ)ಯ ಬಲಭೀಮೇಶ್ವರನ ಜಾತ್ರೆ ಜ.14 ಮತ್ತು 15ರಂದು ನಡೆಯಲಿದೆ. ಜ.14ರಂದು ಪಲ್ಲಕ್ಕಿಯ ಮೂಲಕ ಉತ್ಸವ ಮೂರ್ತಿಯನ್ನು ಭಕ್ತರು 18 ಕಿ.ಮೀ. ದೂರದಲ್ಲಿರುವ ಸನ್ನತಿ ಕ್ಷೇತ್ರದ ಸಮೀಪ ಹುರುಸಗುಂಡಿಗಿ ಭೀಮಾನದಿಗೆ ಕೊಂಡೊಯ್ದು ಗಂಗಸ್ನಾನದ ಮೂಲಕ ಹುರುಸಗುಂಡಿಗಿ ಮಡ್ನಾಳ ಹಳಿಸಗರ ಮೂಲಕ ಶಹಾಪುರ ಪಟ್ಟಣಕ್ಕೆ ವೈಭವ ಮೆರವಣಿಗೆ ಸಾಗಿಬರುತ್ತದೆ. ಜೊತೆಗೆ ಕ್ಷೇತ್ರದ ಸಂಗಮೇಶ್ವರ ಪಲ್ಲಕ್ಕಿ ಇರುತ್ತದೆ.
ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ
ಗುರುಮಠಕಲ್: ವಿವೇಕಾನಂದರ 150ನೇ ಜಯಂತಿ ಅಂಗವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ನರೇಂದ್ರ ಕೋ ನಮನ್ ಚಲೇಗಾ ಯುವ ಜಿತೇಗಾ ಭಾರತ್ ಕಾರ್ಯಕ್ರಮದಡಿಯಲ್ಲಿ 12 ದಿನಗಳ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಿತು. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸರೇಶ ಅಂಬಿಗೇರ ಮಾತನಾಡಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರಗೌಡ ಮಾಗನೂರ, ವಿಜೇತ ತಂಡಕ್ಕೆ 25 ಸಾವಿರ ವೈಯಕ್ತಿಕ ಬಹುಮಾನ ವಿತರಿಸಿ ಮಾತನಾಡಿದರು. ಬಿಜೆಪಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ದೇವಿಸಿಂಗ್ ಠಾಕೂರ್ ಮಾತನಾಡಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ್ 15 ಸಾವಿರ ವೈಯಕ್ತಿಕ ಬಹುಮಾನ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರಣ್ಣಗೌಡ ಮಲ್ಲಾಬಾದಿ, ವಿನೋದ ರಾಠೋಡ್, ರವೀಂದ್ರ ರಡ್ಡಿ, ಮುಖಂಡರಾದ ನೀಲಕಂಠರಾಯ ಎಲ್ಹೇರಿ, ಖಂಡಪ್ಪ ದಾಸನ, ಶರಣಗೌಡ ಬಾಡಿಯಾಳ, ರುದ್ರಗೌಡ, ನಗರಾಧ್ಯಕ್ಷ ಹಣಮಂತ ಇಟಗಿ, ಮಂಜು ಜಡಿ, ಆನಂದ ಗಡ್ಡಿಮನಿ, ಸಾಬು ಚಂಡ್ರಕಿ, ಅಯ್ಯಣ್ಣ ಅಳ್ಳಳ್ಳಿ, ನಾಗರಾಜ ನಾಗಪ್ಪ ಗಚ್ಚಿನಮನಿ, ಮಲ್ಲಿಕಾರ್ಜುನ ಗುಳೇದ್ ಇದ್ದರು.
ಸ್ವಾಮಿ ವಿವೇಕಾನಂದರ ಜಯಂತಿ
ಹುಣಸಗಿ: ಸಮೀಪದ ಸರ್ಕಾರಿ ಪ್ರೌಢಶಾಲೆ ಬಾಚಿಮಟ್ಟಿಯಲ್ಲಿ ಸ್ವಾಮಿ ವಿವೇಕಾನಂದರ 151ನೇ ಜಯಂತಿ ಹಾಗೂ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ 841ನೇ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯಗುರು ವಿ.ಎಂ. ಬೆಳ್ಳುಬ್ಬಿ ಅಧ್ಯಕ್ಷತೆ ವಹಿಸಿ ಮಾತನಾದರು. ಎಸ್ಡಿಎಂಸಿ ಆಧ್ಯಕ್ಷ ಬಾಪುಗೌಡ ಬಿರಾದಾರ ಉಪಸ್ಥಿತರಿದ್ದರು. ಮಹೇಶ ಪೂಜಾ ಕಾರ್ಯಕ್ರಮ ನೇರವೆರಿಸಿದರು. ಮುಲ್ಲಾ ನಿರೂಪಿಸಿದರು. ಯಂಕಣ್ಣ ವಂದಿಸಿದರು.