ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಜ್ಜಲ್ದಲ್ಲಿ ಅದ್ಧೂರಿ ಸಿದ್ದರಾಮೇಶ್ವರ ಜಯಂತಿ

Rashmi Kasaragodu
Updated On : 14 Jan 2014, 11:49 am

ಹುಣಸಗಿ: ಸಮೀಪದ ವಜ್ಜಲ್ ಗ್ರಾಮದಲ್ಲಿ ಬೋವಿವಡ್ಡರ ಕ್ಷೇಮಾಭೀವೃದ್ಧಿ ಸಂಘ ವತಿಯಿಂದ ಸಿದ್ದರಾಮೇಶ್ವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಿದ್ದರಾಮೇಶ್ವರ ಭಾವಚಿತ್ರಕ್ಕೆ ವೀರಶೈವ ಮಹಾ ಪರಿಷತ್ ಜಿಲ್ಲಾಧ್ಯಕ್ಷ ಸಂಗನಗೌಡ ವಜ್ಜಲ್ ಪೂಜೆ ಸಲ್ಲಿಸಿದರು. ನಂತರ ಮಾತನಾಡಿ, ಸಿದ್ದರಾಮೇಶ್ವರರು ತಮ್ಮ ವಚನಗಳು ಇಂದಿಗೂ ಪ್ರಸ್ತುತ, ವಚನಗಳ ಮೂಲಕ ಸಮಾಜವನ್ನು ತಿದ್ದುವಲ್ಲಿ ಪ್ರಯತ್ನಿಸಿದರು. ಇಂದಿನ ಯುವಕರು ಅವರ ವಚನಗಳ ಅಧ್ಯಯನ ಮಾಡಿ ಅವರ ದಾರಿಯಲ್ಲಿ ನಡೆಯಬೇಕೆಂದು ಹೇಳಿದರು.
ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ವಡ್ಡರ ಪ್ರಾಸ್ತಾವಿಕ ಮಾತನಾಡಿದರು. ಮುಖಂಡರಾದ ರಾಜಶೇಖರಗೌಡ ವಜ್ಜಲ, ಗ್ರಾಪಂ ಸದಸ್ಯೆ ನಾಗಮ್ಮ ಪಲ್ಲೆಪ್ಪ, ಹುಸನಪ್ಪ, ಯಮನಪ್ಪ ಮುದನೂರ, ಏಕಪ್ಪ ತುಂಬಗಿ, ಯಲ್ಲಪ್ಪ ವಡ್ಡರ್, ಸೋಮಣ್ಣ, ಲಕ್ಷ್ಮಣ ಗೌಂಡಿ, ಮೈಬೂಬಸಾಬ ಜಕಾತಿ, ರವಿ ಬಾಕ್ಲಿ, ಅಣ್ಣಪ್ಪ ಹಾಸ್ಟೇಲ್ ಸೇರಿದಂತೆ ಇತರರು ಇದ್ದರು.
ಆಶ್ರಯ ಕಾಲೋನಿ ಶಾಲೆಯಲ್ಲಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು. ವಜ್ಜಲ್ ಸಿಆರ್ಪಿ ಚನ್ನಯ್ಯಸ್ವಾಮಿ ಸಿದ್ದರಾಮೇಶ್ವರರ ಕುರಿತು ಮಾತನಾಡಿದರು. ಶಿಕ್ಷಕರ ಸಂಘದ ಸದಸ್ಯ ಶರಣಪ್ಪ ಗುಳಬಾಳ, ಮುಖ್ಯಗುರು ಸುರೇಶ, ಎಸ್ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ, ಭೀಮಣ್ಣ, ಯಂಕಪ್ಪ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement