ವಿವೇಕಾನಂದರು ಯುವಕರಿಗೆ ಸ್ಫೂರ್ತಿ: ಸೈದಪ್ಪ
ಗುರುಮಠಕಲ್: ಸ್ವಾಮಿ ವಿವೇಕಾನಂದರು ಯುವ ಜನರಿಗೆ ದಾರಿದೀಪವಾಗಿರುವ ಮತ್ತು ಮಾರ್ಗದರ್ಶಕರಂತೆ ಇಂದಿಗೂ ಅವರ ವಾಣಿಗಳು ಯುವಕರಿಗೆ ಸ್ಫೂರ್ತಿಯಾಗಿವೆ ಎಂದು ಸೈದಪ್ಪ ಗುತ್ತೇದಾರ ಹೇಳಿದರು. ಗುರುಸಣಗಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಗತ್ ಸಿಂಗ್ ಯುವಕ ಸಂಘ ಹಾಗೂ ಅಪ್ನಾದೇಶ್ ಅಸೋಸಿಯೇಷನ್ ಬಳಗ ಯಾದಗಿರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ 151ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಭಗತ್ ಸಿಂಗ್ ಯುವಕ ಸಂಘದ ಅಧ್ಯಕ್ಷ ಬಸವರಾಜ ಬಡದ್ ಪ್ರಾಸ್ತವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಮಂಜುಳಾ ವಹಿಸಿದ್ದರು. ಸೂರ್ಯಕಾಂತಗೌಡ ಕಟ್ಟಿಮನಿ, ಶಶಿಕಲಾ, ಚನ್ನಪ್ಪಗೌಡ, ತಿಮ್ಮಣ್ಣ, ಎಸ್ಡಿಎಂಸಿ ಅಧ್ಯಕ್ಷ ಶೇಖರಡ್ಡಿ, ಬಸಯ್ಯಸ್ವಾಮಿ ಗುಡಿಮಠ, ಮಹೀಪಾಲರಡ್ಡಿ ಶೇಖರಡ್ಡಿ, ಬಸಲಿಂಗಪ್ಪ ಹೂಗಾರ ಇದ್ದರು. ಮರಲಿಂಗಪ್ಪ ಸ್ವಾಗತಿಸಿ ಬಸವರಾಜ ನಿರೂಪಿಸಿ ವೆಂಕಡರಡ್ಡಿಗೌಡ ವಂದಿಸಿದರು.