ಸರ್ಕಾರ ಕ್ರಮ ಖಂಡಿಸಿ ಪಂಜಿನ ಮೆರವಣಿಗೆ
ಯಾದಗಿರಿ: ಹೈ-ಕ ಅಭಿವೃದ್ಧಿಗಾಗಿ 371 (ಜೆ) ಕಲಂ ನಿಯಮಗಳನ್ನು ರಾಜ್ಯ ಸರ್ಕಾರ ಉಲ್ಲಂಘನೆ ಮಾಡಿ ನೇಮಕಾತಿಯನ್ನು ಮಾಡಿಕೊಳ್ಳುತ್ತಿರುವ ಕ್ರಮ ಖಂಡಿಸಿ ಕರವೇ ಕಾರ್ಯಕರ್ತರು ನಗರದ ಸುಭಾಶ್ಚಂದ್ರ ಭೋಸ್ ವೃತ್ತದಲ್ಲಿ ಪಂಚಿನ ಮೆರವಣೆಗೆಯನ್ನು ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
2013 ಜ.1ರಂದು ಹೈ.ಕ. ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಮೀಸಲಾತಿ ಪ್ರಕಟಿಸಿತ್ತು. ಯಾವುದೇ ನೇಮಕಾತಿ ಮಾಡಿಕೊಳ್ಳಬಾರದೆಂದು ಆದೇಶಿಸಿತ್ತು. ಆದರೂ ಸರ್ಕಾರ ನಿಯಮ ಉಲ್ಲಂಘನೆ ಮಾಡಿ ನೇಮಕಾತಿ ಮಾಡಿಕೊಂಡಿದ್ದಾರೆ. ಕೆಎಂಎಫ್ ಇಲಾಖೆಯಲ್ಲಿ 211, ಆರೋಗ್ಯ ಇಲಾಖೆಯಲ್ಲಿ 184 ಕಾರ್ಮಿಕ ಇಲಾಖೆಯಲ್ಲಿ 35, ವಸತಿ ಶಿಕ್ಷಣ ಇಲಾಖೆಯಲ್ಲಿ ಅನೇಕ ನೇಮಕಾತಿ ಮಾಡಿಕೊಂಡು ಹೈ.ಕ. ಭಾಗಕ್ಕೆ ವಂಚನೆ ಮಾಡುತ್ತಿದ್ದಾರೆ. ಕೂಡಲೇ ನೇಮಕಾತಿಯನ್ನು ತಡೆಯಬೇಕೆಂದು ಆಗ್ರಹಿಸಿದ್ದಾರೆ. ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆಪ್ಪ ಅವರನ್ನು ವಿದೇಶಿ ವೈದ್ಯರಿಂದ ಚಿಕಿತ್ಸೆ ಮಾಡಿಸಿ ಗುಣಮುಖರಾಗುವಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ದೇವು ಪಾಟೀಲ್, ಸಿದ್ದುರಡ್ಡಿ, ಗೌಡಪ್ಪಕೋರಿ, ರವಿದೇವರಮನಿ, ಶರಣಪ್ಪ ವೆಂಕಟೇಶ ಬೊನೇರ, ಕಾಶಿಂ ಪಟೇಲ್, ಫಕೀರ್ ಅಹಮದ್, ಶಿವ ಶಂಕರ್, ಗುರು, ಶಿವು ಸೇರಿದಂತೆ ಮತ್ತಿತರರು ಇದ್ದರು.