ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಿದ್ದರಾಮೇಶ್ವರರ ತತ್ವಾದರ್ಶ ಪಾಲಿಸಲು ಕರೆ'

Rashmi Kasaragodu
Updated On : 14 Jan 2014, 11:50 am


ಸುರಪುರ: 12ನೇ ಶತಮಾನತದ ಶರಣರಲ್ಲಿ ಒಡ್ಡರ ಭೋವಿ ಸಮಾಜಕ್ಕೆ ಸೇರಿದ ಶಿವಯೋಗಿ ಸಿದ್ದರಾಮೇಶ್ವರ ಶ್ರೇಷ್ಠ ಶರಣ. ಆತನ ತತ್ವಾದರ್ಶಗಳನ್ನು ಸರ್ವರು ಪಾಲಿಸಬೇಕೆಂದು ನಿವೃತ್ತ ಪ್ರಾಚಾರ್ಯ ರಾಮಣ್ಣ ಲಸ್ಕರಿ ಕರೆ ನೀಡಿದರು.
ಇಲ್ಲಿಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಸೋಮವಾರ ಏರ್ಪಡಿಸಿದ್ದ ಶಿವಯೋಗಿ ಸಿದ್ದರಾಮೇಶ್ವರರ ಪ್ರಥಮ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ರಾಜ್ಯ ಉಪಾಧ್ಯಕ್ಷ ಡಿ. ರಂಗನಾಥ ಕೆಂಭಾವಿ ಮಾತನಾಡಿದರು. ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ ಉದ್ಘಾಟಿಸಿದರು. ಪ್ರಭಾರಿ ತಹಸೀಲ್ದಾರ್ ಬಸವರಾಜ ಅಂಬರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷ ನಿವಾಸಗೌಡ ಪಾಟೀಲ್, ಪುರಸಭೆ ಉಪಾಧ್ಯಕ್ಷೆ ಗುರುಬಾಯಿ ವಾಲಿ, ಸಮಾಜದ ತಾಲೂಕು ಅಧ್ಯಕ್ಷ ನಾಗಪ್ಪ ಕಟ್ಟಿಮನಿ ವೇದಿಕೆಯಲ್ಲಿದ್ದರು.  ಪುರಸಭೆ ಸದಸ್ಯರಾದ ಪಾರಪ್ಪ ಗುತ್ತೇದಾರ್, ಜೈರಾಮ ಕಟ್ಟಿಮನಿ, ವೆಂಕಟೇಶ ಹೊಸ್ಮನಿ, ಮನೋಹರ ಕುಂಟೋಜಿ, ದಾವುಲ್ಸಾಬ್ ಜಿಟ್ಟಿವಾಲೆ, ವೆಂಕಟೇಶ ಆಲ್ಟಿ, ವೆಂಕಟೇಶ ಶುಕ್ಲಾ, ಮಾನಪ್ಪ ಪ್ಯಾಪಲಿ, ಮುಖಂಡರಾದ ಸಂಗಣ್ಣ ಎಕ್ಕೆಳ್ಳಿ, ಶಿವು ಎಲಿಗಾರ, ವೆಂಕಟರೆಡ್ಡಿ, ರಾಜೂ ವಡ್ಡರ್, ನಾಗರಾಜ ವಡಗೇರಿ ಅನೇಕರಿದ್ದರು. ಸಿದ್ದಯ್ಯಸ್ವಾಮಿ ಸ್ವಾಗತಿಸಿದರು. ಹಣಮಂತ್ರಾಯ ಕಮತಗಿ ನಿರೂಪಿಸಿದರು. ಅಣವೀರಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement