ಕನ್ನಡ ನೆಲ ಪಾವನಗೊಳಿಸಿದ್ದು ಶರಣರು
ಕ.ಪ್ರ. ವಾರ್ತೆ ಶಹಾಬಾದ್ ಜ.14
ಕನಡ ನಾಡಿನಲ್ಲಿ ಶರಣರು, ಸಂತರು ಜನ್ಮತಾಳಿ ತಮ್ಮ ತತ್ತ್ವಾದರ್ಶಗಳಿಂದ ಜನರನು ಸನ್ಮಾರ್ಗದಲ್ಲಿ ಕರೆದೊಯ್ದು ಈ ನೆಲವನು ಪಾವನಗೊಳಿಸಿದ್ದಾರೆ. ದೇಶದಲ್ಲಿ ಅಧರ್ಮ, ಅನೀತಿಗಳು ತಾಂಡವವಾಡಿದಾಗ ಸಂತರು, ಮಹಾಂತರು, ಸಿದ್ದಿಪುರುಷರು ಅವತಾರ ತಾಳಿ ಧರ್ಮ ಸ್ಥಾಪನೆ ಮಾಡಿದ್ದಾರೆಂದು ಗುಲ್ಬರ್ಗದ ಶರಣಬಸವೇಶ್ವರ ಸಂಸ್ಥಾನದ ಬಸವರಾಜಪ್ಪ ಅಪ್ಪಾ ಹೇಳಿದರು.
ಅವರು ಮುಗುಳನಾಗಾವ ಕಟ್ಟಿಮನಿ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಅಭಿನವ ಸಿದ್ದಲಿಂಗ ಶಿವಾಚಾರ್ಯರ ಪಟ್ಟಾಧಿಕಾರದ ಬೆಳ್ಳಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತ ಚಿಕ್ಕದಾದ ಮಠವನು ಶ್ರೀಗಳು ಪೀಠಾಧಿಪತಿಗಳಾದ ನಂತರ ಭಕ್ತರ ಸಹಯೋಗದೊಂದಿಗೆ ಬೃಹದಾಕಾರವಾಗಿ ನಿರ್ಮಿಸಿರುವುದು ಶ್ಲಾಘನೀಯ ಎಂದರು. ಪ್ರತಿದಿನ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿ ತಮ್ಮ ಸಮಸ್ಯೆಗಳಿಗೆ ಶ್ರೀಗಳ ಮಾರ್ಗದರ್ಶನದಲ್ಲಿ ಪರಿಹಾರ ಕಂಡಿದ್ದಾರೆ ಎಂದರು.
ನಾವದಗಿ ಚೆನಬಸವ ಸ್ವಾಮಿ, ಕಟಕೋಳ ನಾಗಭೂಷಣ ಸ್ವಾಮಿ, ಚಿಂಚನಸೂರ ಸಿದ್ಧಮಲ್ಲ ಶಿವಾಚಾರ್ಯ ಸ್ವಾಮಿ ಹಾಗೂ ಚಿತ್ತಾಪುರದ ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರು ಮಾತನಾಡಿದರು.
ಗಣ್ಯರಾದ ಕರಸಿದ್ದಪ್ಪ ಪಾಟೀಲ, ಬೆಳ್ಳಿಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ ಪಾಟೀಲ ಭಂಕೂರ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಕಣಕಿ ಮೊದಲಾದವರು ವೇದಿಕೆಯಲ್ಲಿದ್ದರು. ಗೌಡಗಾಂವನ ಶಿವರುದ್ರಯ್ಯ ಗವಾಯಿ ಹಾಗೂ ಎಂ. ನೇಹಾ ಅವರ ವಚನ ಗಾಯನಕ್ಕೆ ಜ್ಞಾನೇಶ್ವರ ಕುಮಾರ ತಬಲಾ ಸಾಥ್ ನೀಡಿದರು.
ನಾಳೆ ವಿದ್ಯುತ್ ವ್ಯತ್ಯಯ
ಗುಲ್ಬರ್ಗ: ನಗರ ದಕ್ಷಿಣ ವಿದ್ಯುತ್ ವಿತರಣಾ ಕೇಂದ್ರ 110, 11 ಕೆವಿ ಇಲ್ಲಿ ತುರ್ತು ಕೆಲಸ ಕಾರ್ಯ ಕೈಗೊಳ್ಳಲಾಗುತ್ತಿದ್ದು, ದಿನಾಂಕ 16 ರ ಗುರುವಾರ ಬೆಳಗ್ಗೆ 10 ರಿಂದ ಮಧ್ಯಾಹ 12 ಗಂಟೆಯವರೆಗೆ ಗುಲ್ಬರ್ಗ ನಗರದಲ್ಲಿ ಬರುವ ಐ-ವಾನ್ ಶಾಹಿ ಮತ್ತು ಎಫ್-10 ಹೌಸಿಂಗ್ ಬೋರ್ಡ್, 11 ಕೆ.ವಿ. ಫೀಡರ್ ಹಾಗೂ ಗುಲ್ಬರ್ಗ ಗ್ರಾಮೀಣ ಉಪ-ವಿಭಾಗದಡಿಯಲ್ಲಿ ಬರುವ ಆಲ್ ಇಂಡಿಯಾ ರೇಡಿಯೊ, ನಂದಿಕೂರ ಮತ್ತು ನೃಪತುಂಗ 11 ಕೆ.ವಿ. ಫೀಡರ್ಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ಗುಲ್ಬರ್ಗ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಪ್ರಕಟಣೆ ತಿಳಿಸಿದೆ.