ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಚಿಂಚೋಳಿ; ಸಂಭ್ರಮದ ಕಲಿಕೋತ್ಸವ

Rashmi Kasaragodu
Updated On : 15 Jan 2014, 1:05 am

ಚಿಂಚೋಳಿ: ಕಲಿಕೆ ಹಾಗೂ ಕಲಿಕೆಯ ಖಾತರಿಯನು ಹಬ್ಬದೋಪಾದಿಯಲ್ಲಿ ಆಚರಿಸುವುದೇ ಕಲಿಕೋತ್ಸವ.  ಶಾಲೆಯು ಸಮುದಾಯದ ಆಸ್ತಿ. ಮಕ್ಕಳು ದೇಶದ ಆಸ್ತಿಯಾಗಿದ್ದಾರೆಂದು ತಾಲೂಕ ಸಮನ್ವಯಾಧಿಕಾರಿ ವೀರಣ್ಣ ಬೊಮ್ಮನಳ್ಳಿ ಹೇಳಿದರು.
ಪಟ್ಟಣದ ಚಂದಾಪೂರ ಸರಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ 2013-14ನೇ ಸಾಲಿನ ತಾಲೂಕ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕಲಿಕೋತ್ಸವ ಕಾರ್ಯಕ್ರಮದಲ್ಲಿ  ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕಿನ 20 ಕ್ಲಸ್ಟರ್‌ಗಳ 500 ವಿದ್ಯಾರ್ಥಿಗಳು ಕಲಿಕೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆಂದು  ಅವರು ತಿಳಿಸಿದರು. ಪಟ್ಟಣ ಪಂಚಾಯತ ಉಪಾಧ್ಯಕ್ಷ ಶಾಮರಾವ ಕೊರವಿ, ಕೆಪಿಸಿಸಿ ಮುಖಂಡ ಶಿವಕುಮಾರ ಕೊಳ್ಳುರ,  ತಾಲೂಕಿನಲ್ಲಿ ಶಿಕ್ಷಣ ಪ್ರಗತಿ ಮತ್ತು ಶಿಕ್ಷಣದಲ್ಲಿನ ತೊಂದರೆಗಳ ಬಗೆ ್ಗಅಧಿಕಾರಿಗಳ ಗಮನ ಸೆಳೆದರು. ಪಪಂ ಅಧ್ಯಕ್ಷೆ ಇಂದುಮತಿ ಶಿವನಾಗಯ್ಯ ಸ್ವಾಮಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನು ಉದ್ಘಾಟಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ನಾಟೀಕಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಅರ್ಜುನ ದೊಡ್ಡಮನಿ, ಸರಕಾರಿ ನೌಕರರ ಸಂಘದ ಶ್ರೀನಿವಾಸ ಪಾಟೀಲ್, ಉಪನ್ಯಾಸಕ ಮಲ್ಲಿಕಾಜುನ ಪಾಲಾಮೂರ್ ಇನಿತರರು ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement