ಜಾತ್ರೆಯಲ್ಲಿ 1117 ಕುರಿಗಳು ವಶ
ಯಾದಗಿರಿ: ಮಂಗಳವಾರ ನಡೆದ ಮೈಲಾಪುರ ಮಲ್ಲಯ್ಯನ ಜಾತ್ರೆಯಲ್ಲಿ ಭಕ್ತರು ಪಲ್ಲಕ್ಕಿಯ ಮೇಲೆ ಎಸೆಯಲು ತಂದಿದ್ದ 1117 ಕುರಿಗಳನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದೆ ಎಂದು ತಹಸೀಲ್ದಾರ ಡಾ. ಶರಣಪ್ಪ ಸತ್ಯಂಪೇಟ ತಿಳಿಸಿದ್ದಾರೆ. ಮೊದಲಿನಿಂದಲೂ ಭಕ್ತರು ಜಾತ್ರೆಯಲ್ಲಿ ಮಲ್ಲಯ್ಯನ ಪಲ್ಲಕ್ಕಿ ಗಂಗಾ ಸ್ನಾನಕ್ಕೆ ತೆರಳುವ ಸಂದರ್ಭದಲ್ಲಿ ಕುರಿಗಳನ್ನು ಪಲ್ಲಕ್ಕಿ ಮೇಲೆ ಎಸೆದು ತಮ್ಮ ಭಕ್ತಿ ಮೆರೆಯುತ್ತಿದ್ದರು. ಇದರಿಂದ ಪ್ರಾಣಿ ಹಿಂಸೆಯಾಗುತ್ತಿದೆ ಎಂದು ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕಳೆದ ವರ್ಷದಿಂದ ಕುರಿ ಹಾರಿಸುವದನ್ನು ನಿರ್ಬಂಧಿಸಿ ಅಗತ್ಯ ಆರು ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಿ, ಮೈಲಾಪುರಕ್ಕೆ ಬರುವ ಭಕ್ತರನ್ನು ತಪಾಸಣೆ ಮಾಡಿ ಮರಿಗಳನ್ನು ವಶಕ್ಕೆ ತೆಗೆದುಕೊಂಡರು.