ಧಮ್ಮಕ್ರಾಂತಿ ಉತ್ಸವ ಇಂದು
ಗುಲ್ಬರ್ಗ: ನಗರದ ಎಂಎಸ್ಕೆ ಮಿಲ್ ಹತ್ತಿರವಿರುವ ದೀಕ್ಷಾಭೂಮಿ ಸಿದ್ದಾರ್ಥ ನಗರದಲ್ಲಿ ಜ.15 ರಂದು ಸಂಜೆ 5.30ಕ್ಕೆ ಧಮ್ಮಕ್ರಾಂತಿ ಉತ್ಸವ ನಡೆಯಲಿದೆ.ಕೊಳ್ಳೇಗಾಲ ಚೇತನವ ಬುದ್ಧ ವಿಹಾರದ ಭಂತೆ ಬೋಧಿ ರತ ಹಾಗೂ ಉರಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮಿ ಸಾನಿಧ್ಯವಹಿಸುವರು.ರಾಜ್ಯ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ ಕಾರ್ಯಕ್ರಮ ಉದ್ಘಾಟಿಸುವರು. ಧಮ್ಮ ಕ್ರಾಂತಿ ಉತ್ಸವ ಸಂಚಲನಾ ಸಮಿತಿ ಅಧ್ಯಕ್ಷ ಶಿವರಾಮ ಮೋಘಾ ಅಧ್ಯಕ್ಷತೆ ವಹಿಸುವರು. ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಆರ್. ರುದ್ರಯ್ಯ ಹಾಗೂ ಶಿವಶಂಕರ ಗುರುಗುಂಟೆ ಅವರನು ಸನ್ಮಾನಿಸಲಾಗುವುದು. ಬೌದ್ಧರು ಈ ದೇಶದ ಮೂಲ ನಿವಾಸಿಗಳು ಹಾಗೂ ನಾಗಾಕುಲದ ಪರಂಪರೆ ಮತ್ತು ಗೌತಮ ಬುದ್ಧ ಕುರಿತು ಪ್ರೊ. ಪ್ರಕಾಶ ಸಿರ್ಸಾಟ್ ಉಪನ್ಯಾಸವನು ನೀಡಲಿದ್ದಾರೆ.
ಬೆಂಕಿ ಆಕಸ್ಮಿಕ: ಆಸ್ತಿ ಹಾನಿ
ಗುಲ್ಬರ್ಗ: ಆಳಂದ ತಾಲೂಕಿನ ಕೆರಿಅಂಬಲಗಾ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿರುವ ವರದಿಯಾಗಿದೆ.ಗ್ರಾಮದ ಹಣಮಂತ ರಾಮಚಂದ್ರ ಕುಮಸಿ, ನಾಗಪ್ಪ ರಾಮಚಂದ್ರ ಕುಮಸಿ, ರೇವಣಸಿದ್ದಪ್ಪ ಪರಸಪ್ಪ ಕುಮಸಿ ಮತ್ತು ಶರಣಪ್ಪ ರೇವಣಸಿದ್ದಪ್ಪ ಕುಮಸಿ ಅವರಿಗೆ ಸೇರಿದ ಮನೆಗಳು ಸುಟ್ಟು ಅಡುಗೆ ಸಾಮಾನು, ಬಟ್ಟೆ, ಬಂಗಾರದ ಒಡವೆಗಳು ಸುಟ್ಟು ಸುಮಾರು 2 ಲಕ್ಷ ನಷ್ಟವಾಗಿದೆ ಎಂದು ಶಂಕರ ಕೆರಮಗಿ ತಿಳಿಸಿದ್ದಾರೆ.
17ರಂದು ಸಮಾವೇಶ
ಗುಲ್ಬರ್ಗ: ಮುಂಬರುವ ಲೋಕಸಭಾ ಚುನಾವಣೆ ಹಿನೆಲೆಯಲ್ಲಿ ಜನತಾ ದಳ (ಜಾತ್ಯತೀತ) ಪಕ್ಷದ ವತಿಯಿಂದ ಸ್ಥಳೀಯ ಸಂಸ್ಥೆಗಳ ಗ್ರಾಮ ಪಂಚಾಯ್ತಿ, ತಾಪಂ, ಜಿಪಂ, ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ, ನಗರಪಾಲಿಕೆ ಹಾಗೂ ಸಹಕಾರ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಸ್ಪರ್ಧೆ ಮಾಡಿದ ಅಭ್ಯರ್ಥಿಗಳ ಹಾಗೂ ಆಯ್ಕೆಯಾದ ಸದಸ್ಯರುಗಳ ಸಮಾವೇಶವನು ಜ.17 ರಂದು ಬೆಂಗಳೂರಿನ ಅರಮನೆಯ ಗಾಯತ್ರಿ ವಿಹಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಮಾಹಿತಿಗೆ ಬಸವರಾಜ ತಡಕಲ್ರನು ಸಂಪರ್ಕಿಲು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ ಪೊದ್ದಾರ ತಿಳಿಸಿದ್ದಾರೆ.