ನೀರಿನ ಖಾಸಗೀಕರಣ ವಿರೋಧಿಸಿ ಸಹಿ ಸಂಗ್ರಹ
ಗುಲ್ಬರ್ಗ: ನೀರಿನ ಹಕ್ಕಿಗಾಗಿ ಜನಾಂದೋಲನ ಗುಲ್ಬರ್ಗ ಘಟಕ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯದಲ್ಲಿ ನಡೆಯುವ ನೀರಿನ ಖಾಸಗೀಕರಣ ವಿರೋಧಿಸಿ ಸಹಿ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸರ್ಕಾರ ತನ ಜವಾಬ್ದಾರಿಯನು ಮರೆತು ಮಹಾನಗರ ಪಾಲಿಕೆ ವ್ಯಾಪ್ತಿಯ ನೀರು ಸರಬರಾಜು ವಿದೇಶಿ ಸಂಸ್ಥೆಗಳ ಕೈಹಿಡಿಯಲು ಸರ್ಕಾರ ಸಿದ್ಧತೆ ಮಾಡುತ್ತಿದೆ.
ದೆಹಲಿಯಲ್ಲಿ ಜನರಿಗೆ ಉಚಿತ ನೀರು ಕೊಡುವ ಯೋಜನೆ ಯಾರಿಯಾಗುತ್ತಿದ್ದರೆ ರಾಜ್ಯದಲ್ಲಿ ನೀರಿನ ಖಾಸಗೀಕರಣ ಪ್ರಾರಂಭವಾಗಿತ್ತಿದೆ. ಬೆಂಗಳೂರಿನ ಜಲ ಮಂಡಳಿಯೇ ಪ್ರತ್ಯೇಕವಾಗಿದೆ. ಆದರೆ ಇವೆಲ್ಲವೂ ಮುಚ್ಚಿ ನೀರು ಸರಬರಾಜನು ವಿದೇಶಿ ಸಂಸ್ಥೆಗಳ ಕೈಹಿಡಿಯಲು ಸರ್ಕಾರ ಮುಂದಾಗುತ್ತಿದೆ.
ರಾಜ್ಯದಲ್ಲಿ ಎಲ್ಲಾ ರೀತಿಯ ನೀರು ಖಾಸಗೀಕರಣ ತಕ್ಷಣವೇ ನಿಲ್ಲಬೇಕು. ಎಲ್ಲಾ ನಾಗರಿಕರಿಗೂ ನೀರಿನ ಭದ್ರತೆ ಒದಗಿಸುವ ಕಾಯ್ದೆ ಜಾರಿಗೆ ತರಬೇಕು. ಸರ್ಕಾರ ಪ್ರತಿದಿನ ವ್ಯಕ್ತಿಯೊಬ್ಬರಿಗೆ 135 ಲೀಟರ್ ನೀರು ಉಚಿತವಾಗಿ ಒದಗಿಸಬೇಕು. ನೀರು ಸರಬರಾಜು ಮಾಡಲು ಸರ್ಕಾರಿ ಸಂಸ್ಥೆಗಳನು ಪ್ರಜಾತಂತ್ರಗೊಳಿಸಿ ಸಮರ್ಪಕ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಖಾಸಗೀಕರಣ ನಿಲ್ಲಿಸಬೇಕು. ಅದಕ್ಕಾಗಿ ನಮ್ಮ ನೀರು ಆಂದೋಲನ ರಾಜ್ಯಾದ್ಯಂತ ಆರಂಭಿಸಬೇಕು.
ಗುಲ್ಬರ್ಗ ನಗರದಲ್ಲಿ 24/7ರ ಯೋಜನೆ ಬಡ ಕೂಲಿ ಕಾರ್ಮಿಕರ ಆಟೋ ಚಾಲಕರು ಮನೆ ಕೆಲಸ ಮಾಡುವವರು, ಸ್ಲಂ ಜನರಿಗೆ ಈ ಯೋಜನೆ ಮಾರಕವಾಗಿದೆ. ಆದ್ದರಿಂದ ಈ ಯೋಜನೆಯನು ಸರ್ಕಾರ ತಕ್ಷಣದಿಂದಲೇ ಕೈಬಿಡಬೇಕೆಂದು ನೀರಿನ ಹಕ್ಕಿಗಾಗಿ ಜನಾಂದೋಲನ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಸವರಾಜ ಪೂಜಾರಿ, ಕಾರ್ಯದರ್ಶಿ ಬಸವರಾಜ ರಾವೂರ, ಜಿಲ್ಲಾ ಸಂಚಾಲಕ ಬಾಬುರಾವ ದಂಡಿನಕರ್, ಗಣೇಶ ಕಾಂಬಳೆ ಸೇರಿದಂತೆ ಇತರರು ಇದ್ದರು.