ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಟ್ಟಣದಾದ್ಯಂತ ಸಂಕ್ರಾಂತಿ ಸಡಗರ

Rashmi Kasaragodu
Updated On : 15 Jan 2014, 1:06 am

ಹುಣಸಗಿ: ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಾದ ವಜ್ಜಲ್, ಕಾಮನಟಗಿ, ಬಲಶೆಟ್ಟಿಹಾಳ್, ದ್ಯಾಮನಹಾಳ ಸೇರಿದಂತೆ ಅನೇಕ ಕಡೆಗಳಲ್ಲಿ ಈ ಬಾರಿಯ ಸಂಕ್ರಾಂತಿಯ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಕೂಡಲ ಸಂಗಮ, ಗೋವಾ, ಆಲಮಟ್ಟಿ, ನಾರಾಯಣಪುರ ಸೇರಿದಂತೆ ಅನೇಕ ಸ್ಥಳಗಳಿಗೆ ತೆರಳಿ ಎಳ್ಳಿನಿಂದ ಸ್ನಾನ ಮಾಡಿ ಸ್ನೇಹಿತರು ಮತ್ತು ಬಂಧುಗಳೊಂದಿಗೆ ತೆರಳಿ ಬುತ್ತಿಯ ಊಟ ಮಾಡಿ ಸಂಭ್ರಮಿಸಿದರು. ಪ್ರತಿವರ್ಷಕ್ಕಿಂತ ಈ ಬಾರಿಯ ಸಂಕ್ರಾಂತಿಯು ವಿಶೇಷ ಮತ್ತು ಸಡಗರದಿಂದ ಆಚರಿಸಿದ ಯುವಕರು, ತಂಡೋಪ ತಂಡವಾಗಿ ಬೈಕ್‌ಗಳ ಮೇಲೆ ಊರಿಗೆ ಹೋಗುತ್ತಿರುವುದು ಸಾಮಾನ್ಯವಾಗಿ ಕಾಣುತ್ತಿತ್ತು.
  ಬೆಳಿಗ್ಗೆಯಿಂದಲೇ ಅನೇಕ ಜನರು ಬೇರೆ-ಬೇರೆ ಸ್ಥಳಗಳಿಗೆ ಹೋಗುವ ಪ್ರಯಾಣಿಕರಿಂದ ಬಸ್ ನಿಲ್ದಾಣವು ತುಂಬಿ-ತುಳಕುತ್ತಿದ್ದುದ್ದು ಕಂಡುಬಂದಿತು. ಮಧ್ಯಾಹ್ನ ಸಾರ್ವಜನಿಕರಿಲ್ಲದೇ ಪಟ್ಟಣ ಬಣಗುಡುವಂತೆ ಭಾಸವಾಯಿತು.
ಬೆಲೆ ಏರಿಕೆಗೆ ಬೆಲೆ ಇಲ್ಲ: ದಿನನಿತ್ಯದ ದಿನಸಿ ಸಾಮಾನುಗಳು ಸೇರಿದಂತೆ ಅನೇಕ ವಸ್ತುಗಳ ಬೆಲೆ ಗಗನಕ್ಕೇರಿದರೂ ಕ್ಯಾರೆ ಎನ್ನದೇ ಗ್ರಾಹಕರು ಖರೀದಿಸುತ್ತಿರುವ ದೃಶ್ಯ ಎಲ್ಲೇಡೆ ಸಾಮಾನ್ಯವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement