ಪೈಗಂಬರ್ ಸಂದೇಶ ಪಾಲಿಸಿ
ಕ.ಪ್ರ. ವಾರ್ತೆ ಚಿಂಚೋಳಿ ಜ.14
ಪ್ರವಾದಿ ಮಹಮದ್ ಪೈಗಂಬರರ ಜನ್ಮ ದಿನವಾದ ಈದ್‌ಮಿಲಾದ್ ಅಂಗವಾಗಿ ಚಂದಾಪೂರ ನಗರದ ನಮಲ್ ಸೊಸೈಟಿ ವತಿಯಿಂದ ಏರ್ಪಡಿಸಿದ್ದ ಬಡ ರೋಗಿಗಳಿಗೆ ಹಣ್ಣು ಹಂಪಲು ಮತ್ತು ಬಟ್ಟೆ ವಿತರಣೆ ಕಾರ್ಯಕ್ರಮವನ್ನು ಶಾಸಕ ಡಾ. ಉಮೇಶ ಜಾಧವ್ ಉದ್ಘಾಟಿಸಿದರು.
ಪ್ರವಾದಿ ಮಹಮದ್ ಪೈಗಂಬರ್‌ರ ಶಾಂತಿ ಸಂದೇಶಗಳು ನಮ್ಮೆಲ್ಲರಿಗೆ ಅಗತ್ಯವಾಗಿವೆ. ಸಂಕ್ರಾಂತಿ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಒಂದೇ ದಿನ ಆಚರಿಸುತ್ತಿರುವುದು ಭಾವೈಕ್ಯತೆಯ ಸಂಕೇತವಾಗಿದೆ ಎಂದು ಡಾ. ಜಾಧವ್ ನುಡಿದರು. ಕಾರ್ಯಕ್ರಮದಲ್ಲಿ ದಲಿತ ಮುಖಂಡ ಗೋಪಾಲರಾವ ಕಟ್ಟಿಮನಿ, ಕೆ.ಎಮ್.ಬಾರಿ ಮಾತನಾಡಿದರು.
ಡಾ. ತಹನೀಯತ ಬೇಗಂ, ಪಪಂ ಅಧ್ಯಕ್ಷೆ ಇಂದುಮತಿ ಸ್ವಾಮಿ, ನಮಲ್ ಸೊಸೈಟಿ ಅಧ್ಯಕ್ಷ ಮಹ್ಮದ ಹಾಫೀಜ್, ಪಪಂ ಸದಸ್ಯರಾದ ಅಬ್ದುಲ್ ಬಾಸಿತ, ತಾಲೂಕ ವೀರಶೈವ ಸಮಾಜದ ಅಧ್ಯಕ್ಷ ವಿಶ್ವನಾಥ ಪಾಟೀಲ್,ಮುಂತಾದವರು ಭಾಗವಹಿಸಿದರು. ಮಹ್ಮದ ಹಾಫೀಜ್ ಸ್ವಾಗತಿಸಿದರು. ಮಹ್ಮದ ಹನ್ನುಮಿಯ ವಂದಿಸಿದರು.