ವಾಡಿ ಈದ್ ಮಿಲಾದ್ನ ಭವ್ಯ ಮೆರವಣಿಗೆ
ಶಹಾಬಾದ್: ಪಟ್ಟಣದಲ್ಲಿ ಹಜರತ್ ಮಹ್ಮದ್ ಮುಸ್ತಪಾ ಸಾಲ್ಲಹೋ ಅಲೇಯೂ ಸಲಂ ಅವರ ಜನ್ಮದಿನದ ನಿಮಿತ್ತ ಈದ್ ಮಿಲಾದ್ ಹಬ್ಬದ ಅಂಗವಾಗಿ ಆಯೋಜಿಸಿದ್ದ ಭವ್ಯ ಮರೆವಣಿಗೆಯನ್ನು ಶಾಸಕ ಪ್ರಿಯಾಂಕ ಖರ್ಗೆ ಚಾಲನೆ ನೀಡಿದರು. ಪಟ್ಟಣದ ಜಮೀಯಾ ಮಸೀದಿಯಲ್ಲಿ ಸಂಜೆ ಪ್ರಾರ್ಥನೆಯ ನಂತರ ಪ್ರಾರಂಭವಾದ ಬೃಹತ್ ಮೆರವಣಿಗೆ ಮಹತ್ಮಾಗಾಂಧಿ ವೃತ್ತದ ಮೂಲಕ ಮುಖ್ಯರಸ್ತೆ, ಡಾ. ಅಂಬೇಡ್ಕರ್ ವೃತ್ತದ ಮೂಲಕ ರಾತ್ರಿ 8ಕ್ಕೆ ಜಾಮೀಯಾ ಮಜೀದ ತಲುಪಿತು. ಮೆರವಣಿಗೆಯೂ ಉದ್ದಕ್ಕೂ ಕುದುರೆ ಸವಾರಿ, ಕುದುರೆಯ ವಿಶಿಷ್ಟ ನೃತ್ಯ, ಯುವಕರಿಂದ ವಿವಿಧ ಕಸರತ್ತ, ಬೈಕ್ ರ್ಯಾಲಿ ನಡೆಸಲಾಯಿತು. ಮೆರವಣಿಗೆಯಲ್ಲಿ ಮೈಮೂದ ಸಾಹೇಬ, ಟೋಪಣ ಕೋಮಟೆ, ಎಸಿಸಿ ಘಟಕ ನಿರ್ದೇಶಕ ಎಸ್.ಪಿ. ಸಿಂಗ್, ಮಕ್ಬೂಲ ಜಾನಿ, ಮಖ್ಸೂದ ಜುನೇದಿ, ಎಕ್ಬಾಲ್ ಪಟೇಲ, ಬಾಬುಮೀಯ, ಬಸೀರ್ ಖುರೇಶಿ, ಅಬ್ದುಲ ಲೈಥಿಫ್ ಸೌದಾಗರ, ಅಲ್ತಾಫ್ ನಾಶೀರ ಹುಸೇನ್, ಸದಾಶಿವ ಕಟ್ಟಿಮನಿ, ಮಹಿಬೂಬ ಅಮೀನ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.