ಶ್ರದ್ಧಾ ಭಕ್ತಿಯಿಂದ ಪೈಗಂಬರ್ ಜಯಂತಿ ಆಚರಣೆ
ಸುರಪುರ: ರಂಗಂಪೇಟೆಯಲ್ಲಿ ಮಂಗಳವಾರ ಮುಸ್ಲಿಂ ಭಾಂದವರು ಈದ್-ಮಿಲಾದುನ್ನಬಿ (ಮಹಮದ್‌ಪೈಗಂಬರರ ಜನ್ಮದಿನಾಚರಣೆ)ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕಂಚಗಾರ ಮೋಹಲ್ಲಾದ ಜಸ್ನೇ-ಈದ್ಮಿಲಾದುನ್ನಬಿ ಸಂಸ್ಥೆ ಹಾಗೂ ಸಮಾಜ ಸೇವಾ ಸಂಘದ ವತಿಯಿಂದ ಜಯಂತಿಯ ಅಂಗವಾಗಿ ಮಕ್ಕಾ ಮದೀನಾ ಭಾವಚಿತ್ರಗಳ ಭವ್ಯ ಮೆರವಣಿಗೆ ಏರ್ಪಡಿಸಲಾಗಿತ್ತು. ಉತ್ಸವ ಸಮಿತಿಯ ಅಧ್ಯಕ್ಷ ಅಹ್ಮಮದ ಹುಸೇನ್(ಲೈಟ್ ಬಾಬು) ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಪ್ರತಿಯೂಬ್ಬ ಮುಸ್ಲಿಂ ಭಾಂದವರಿಗೆ ಇವತ್ತಿನ ದಿನ ಸಂತಸ ತರುವ ಪವಿತ್ರ ದಿನವಾಗಿದೆ. ಇದು, ಮಾನವ ಕುಲದ ಉದ್ಧಾರಕ ಮತ್ತು ಇಸ್ಲಾಂ ಧರ್ಮದ ಪ್ರತಿಪಾದಕ ಹಾಗೂ ಅಲ್ಲಾನ ಸ್ವರೂಪವೆಂದೇ ಭಾವಿಸಲಾದ ಪೈಗಂಬರರು ಜನಿಸಿದ ದಿನವಾಗಿದೆ. ಅವರ ಜನ್ಮದಿನ ಆಚರಿಸುವುದು ನಮೆಗೆಲ್ಲ ಸಂತಸದ ಕ್ಷಣವಾಗಿದೆ ಎಂದರು.
ಪೈಗಂಬರರ ಜನ್ಮದಿನಾಚರಣೆ ಅಂಗವಾಗಿ ಪಟ್ಟಣದ ಎಲ್ಲಾ ಮಸೀದಿಗಳಲ್ಲಿ ಬೆಳಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕುರಾನ್ ಪಠಣ ಮಾಡಲಾಯಿತು.
ಸಮಿತಿ ಉಪಾಧ್ಯಕ್ಷ ಎಕ್ಬಾಲ ಹುಸೇನ ಜಮಾದಾರ್, ಕಾರ್ಯದರ್ಶಿ ಮಹ್ಮದ ಮಿರಾಜ್ ಬಿಸ್ತಿ, ಮಹ್ಮದ್ ಹುಸೇನೆ ಸಂಡು, ಉಸ್ತಾದ ವಜಾಹತ್ ಹುಸೇನ, ಶಿವುಕುಮಾರ ಎಲಿಗಾರ, ಸೈಯದ್ ಖಾಜೀಸಾಬ, ಎ.ಕೆ. ರಾಜು, ಸದ್ದಾಂ ಬಿಸ್ತಿ, ಸರಮೋದ್ದಿನ್ ಬಿಸ್ತಿ, ಖಾಜಾ ದಡೇಕಲ್, ಟಿಪ್ಪು, ತೋಫಿಕ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.