ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸ್ವಾಮಿ ವಿವೇಕಾನಂದರ ಜಯಂತಿ

Rashmi Kasaragodu
Updated On : 15 Jan 2014, 1:05 am

ಗುಲ್ಬರ್ಗ: ವಿವೇಕಾನಂದರು ಬಾಲ್ಯದಿಂದಲೇ ಚಿಂತನಾಶೀಲರು, ಧೈರ್ಯವಂತರು, ನಿರ್ಭಯವಾಗಿ ಪ್ರಶಿಸುವ ಗುಣ ಹೊಂದಿದ್ದರು ಎಂದು ಮಹೇಶ್ವರಾನಂದ ಸರಸ್ವತಿ ಮಹಾರಾಜ ಹೇಳಿದರು.
ನಗರದ ದೊಡ್ಡಪ್ಪ ಅಪ್ಪ ವಸತಿ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವದಲ್ಲಿ ಮಾತನಾಡಿದರು. ರಾಮಕೃಷ್ಣ ಪರಮಹಂಸರಿಗೆ ನೀವು ದೇವರನು ಕಂಡಿದ್ದೀರಾ ಎಂದು ನೇರವಾಗಿ ಪ್ರಶಿಸಿದರು. ಅಮೇರಿಕಾದ ಚಿಕಾಗೋದಲ್ಲಿನ ವಿಶ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಅಮೇರಿಕಾದ ಸಹೋದರ ಸಹೋದರಿಯರೇ ಎಂಬ ಉಕ್ತಿಯ ಮೂಲಕ ಆರಂಭಿಸಿದ ಭಾಷಣ ವಿಶ್ವವನು ಬೆರಗುಗೊಳಿಸಿತು ಎಂದರು.
ಪ್ರಾಚಾರ್ಯ ವಿನೋದ ಕುಮಾರ ಎಲ್.ಪತಂಗೆ ಮಾತನಾಡಿ, ಬಾಲ್ಯಾವಸ್ಥೆಯ ಮತ್ತು ವಯಸ್ಕ ವಿದ್ಯಾರ್ಥಿಗಳಿಗೆ ಬೋಧನೆ ಸುಲಭ ಆದರೆ ಯೌವನಾವಸ್ಥೆಯ ಸಂಕ್ರಮಣವಸ್ಥೆಯೇ ಪಿಯುಸಿ ಅವಧಿ. ಈ ಅವಧಿಯಲ್ಲಿ ಯುವಕರಲ್ಲಿ ಆತ್ಮಬಲ ತುಂಬುವುದು ಬಹಳ ಮುಖ್ಯ. ವಿದ್ಯಾರ್ಥಿಗಳಿಗೆ ಬರೀ ಪಠ್ಯ ಬೋಧನೆಯೇ ಸಾಲದು. ಅವರಲ್ಲಿ ಅಧ್ಯಾತ್ಮ, ದಯೇ, ಕರುಣೆ, ದಾಸೋಹದಂತಹ ಮೌಲ್ಯಗಳು ಬೆಳಸಬೇಕಾಗದೆ ಎಂದು ಹೇಳಿದರು.
ಸಂತೋಷ ಬೋರಟೆ ಸ್ವಾಗತಿಸಿ, ಕುಮಾರಿ ಶ್ರೇಯಾ ಕುಲ್ಕರ್ಣಿ, ಕುಮಾರ ನಾಗರಾಜ ಬೀರನಳ್ಳಿ ವಿವೇಕಾನಂದರ ವಿಚಾರಗಳ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಉಪನ್ಯಾಸಕ ವಿಠ್ಠಲರಾವ್ ಪಾಟೀಲ್ ನಿರೂಪಿಸಿ, ಭಾಗ್ಯವತಿ ಎನ್.ಪಾಟೀಲ್ ವಂದಿಸಿದರು.
ಹಾಲು, ಹಣ್ಣು ವಿತರಣೆ: ನಗರದ ಮಹಾತ್ಮಗಾಂಧಿ ಕುಷ್ಠರೋಗ ಕ್ಷೇಮಾಭೀವೃದ್ಧಿ ಸಂಘದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಬಾಲಮೌಲ ತಪಸ್ವಿ ರಾಮಲಿಂಗಯ್ಯ ಸ್ವಾಮಿ ಕುಷ್ಠರೋಗಿಗಳಿಗೆ ಹಾಲು ಹಣ್ಣು ವಿತರಿಸಿದರು. ಹಣಮಂತ ಹೆಚ್. ಶರಣು ಕಲ್ಲಶೆಟ್ಟಿ, ಯಶವಂತ ಧಂಗಾಪುರ, ಸತೀಶಕುಮಾರ, ಎಸ್. ಗಣಾಚಾರಿ, ನೀಲಕಂಠಯ್ಯ ಸ್ವಾಮಿ ಹಿರೇಮಠ ಹಾಗೂ ಬಡಾವಣೆಯ ಸಮಸ್ತ ಜನರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement