ಇಂದು ಧಮ್ಮ ಕ್ರಾಂತಿ
ಗುಲ್ಬರ್ಗ: ಎಂಎಸ್ಕೆ ಮಿಲ್ ಹತ್ತಿರವಿರುವ ದೀಕ್ಷಾ ಭೂಮಿ ಸಿದ್ಧಾರ್ಥ ನಗರದಲ್ಲಿ ಜ.16 ರಂದು ಸಾಯಂಕಾಲ 5.30ಗಂಟೆಗೆ ಧಮ್ಮ ಕ್ರಾಂತಿ ಉತ್ಸವ ನಡೆಯಲಿದೆ.
ಚೇತನವ ಬುದ್ಧ ವಿಹಾರದ ಭಂತೆ ಬೋಧಿ ರತ್ನ, ಔರಂಗಬಾದಿನ ಧಮ್ಮಜ್ಯೋತಿ, ಹಾಗೂ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮಿ ಸಾನ್ನಿಧ್ಯ ವಹಿಸುವರು.
ಧಮ್ಮಕ್ರಾಂತಿ ಉತ್ಸಹ ಸಹ ಸಂಚಾಲಕ ಡಾ. ವಿಠ್ಠಲ ದೊಡ್ಡಮನಿ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯ ಕೆ.ಬಿ. ಶಾಣಪ್ಪ ಹಾಗೂ ಡಿ.ಎಸ್. ವೀರಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪಂಚಾಯತ್ ರಾಜ್ ಇಲಾಖೆಯ ಅಧೀಕ್ಷಕ ಅಭಿಯಂತರ ಸೂರ್ಯಕಾಂತ ಶೃಂಗೇರಿ, ಸಣ್ಣ ನೀರಾವರಿ ಇಲಾಖೆ ಅಧೀಕ್ಷಕ ಅಭಿಯಂತರ ಪ್ರಕಾಶ ಶ್ರೀಹರಿ ಅವರನ್ನು ಸನ್ಮಾನಿಸಲಾಗುವುದು. ಡಾ. ಬಾಬಾಸಾಹೇಬ ಅಂಬೇಡ್ಕರ್ ಕನಸು ಪ್ರಬುದ್ಧ ಭಾರತದ ನನಸು ಕುರಿತು ಪ್ರೊ. ಸುಷ್ಮಾ ಅಂದಾರೆ ಉಪನ್ಯಾಸ ನೀಡಲಿದ್ದಾರೆ.