ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಂಡೆ ನಿಧನಕ್ಕೆ ಮಾಜಿ ಸಚಿವ ನರಸಿಂಹನಾಯಕ ಕಂಬನಿ

Rashmi Kasaragodu
Updated On : 16 Jan 2014, 11:22 am

ಹುಣಸಗಿ: ಇತ್ತೀಚೆಗೆ ಗುಲ್ಬರ್ಗದಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ವೀರ ಮರಣ ಹೊಂದಿದ ಮಲ್ಲಿಕಾರ್ಜುನ ಬಂಡೆ ಅವರ ನಿಧನಕ್ಕೆ ಮಾಜಿ ಸಚಿವ ನರಸಿಂಹನಾಯಕ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಮಲ್ಲಿಕಾರ್ಜುನ ಬಂಡೆ ದಕ್ಷ ಅಧಿಕಾರಿಯಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ರಕ್ಷಣೆಗಾಗಿ ಗುಂಡೆಟಿಗೂ ಅಂಜದ ಗುಂಡಿಗೆಯುಳ್ಳವರಾಗಿದ್ದರು ಎಂದು ಬಣ್ಣಿಸಿದರು.
ಹುಣಸಗಿ ಕಸಾಪ ಅಧ್ಯಕ್ಷ ವೀರೇಶ ಹಳ್ಳೂರ, ವಿಶ್ವಚೇತನ ಗೆಳೆಯ ಬಳಗದ ಅಧ್ಯಕ್ಷ ಶಿವಕುಮಾರ ಬಂಡೋಳಿ, ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಸಂಗನಗೌಡ ಧನರಡ್ಡಿ, ಜಿಪಂ ಸದಸ್ಯ ಎಚ್.ಸಿ. ಪಾಟೀಲ, ನಾಗಣ್ಣ ದಂಡಿನ್, ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರಗೌಡ ವಜ್ಜಲ, ಗ್ರಾಪಂ ಅಧ್ಯಕ್ಷ ಸುರೇಶ ನೀರಲಗಿ, ಆರ್.ಎಂ. ರೇವಡಿ ಸೇರಿದಂತೆ ಇತರರು ಶೋಕ ವ್ಯಕ್ತಪಡಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement