ಮೂರ್ತಿಯ ಖಡ್ಗ ವಿರೂಪ: ಖಂಡನೆ
ಶಹಾಪುರ: ರಾಯಚೂರಿನಲ್ಲಿ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮಳ ಕೈಯಲ್ಲಿರುವ ಖಡ್ಗ ವಿರೂಪಗೊಳಿಸಿರುವುದನ್ನು ತಾಲೂಕ ವೀರಶೈವ ಲಿಂಗಾಯತ ಪಂಚಮ ಸಾಲಿ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಆಕಸ್ಮಿಕವಾಗಿ ಅಥವಾ ಉದ್ದೇಶ ಪೂರ್ವಕವಾಗಿ ಇಂತಹ ಹೇಯ ಕೃತ್ಯಗಳಿಗೆ ಆಸ್ಪದ ಕೊಡಬಾರದು. ಇಂಥಹ ಘಟನೆಗಳ ಜರುಗುವುದರಿಂದ ದೇಶದ ಮಹಾನ್ ಚೇತನಗಳಿಗೆ ಅವಮಾನ ಮಾಡಿದಂತಾಗುತ್ತದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾಲೂಕ ಅಧ್ಯಕ್ಷ ದೇವಿಂದ್ರಪ್ಪ ತೋಟಗೇರ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಡಿ.ಜಿ. ಬಳ್ಳೂರಗಿ, ಎಂ.ಪಿ. ಸಾಸನೂರ, ಮಹಾದೇವಪ್ಪ ಸಾಸನೂರ, ಬಿ.ಎಸ್. ಪಾಟೀಲ, ಡಾ. ಬಸವರಾಜ ಶಿಣ್ಣೂರ, ರಮೇಶ ಸಾಹು ಕೊಳೂರ, ಎಂ.ಎ. ಅವಂಟಿ, ಇತರರು ಉಪಸ್ಥಿತರಿದ್ದರು.