ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿವಿಧ ಸಂಘಟನೆಗಳಿಂದ ಸಂತಾಪ

Rashmi Kasaragodu
Updated On : 16 Jan 2014, 11:21 am

ಶಹಾಪುರ: ಗುಲ್ಬರ್ಗ ರೋಜಾ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆಯ ಮರಣ ನಮ್ಮೆಲ್ಲರನ್ನು ದಿಗ್ಭ್ರಮೆಗೊಳಿಸಿದೆ. ಸಮಾಜ ದ್ರೋಹಿಗಳಾಗಿರುವ ರೌಡಿಗಳ ಮೇಲೆ ಹದ್ದು ಬಸ್ತಿನ ಕ್ರಮ ಕೈಗೊಳ್ಳದೆ ಇರುವುದೇ ಮುನ್ನಾನಂಥ ಕೊಲೆಗಡುಕರು ಬೆಳೆಯಲು ಕಾರಣ ಎಂದು ಶ್ರೀರಾಮ ಸೇನೆ ಕಾರ್ಯದರ್ಶಿ ಮೇಘರಾಜ ಜಾಧವ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮ ಸೇನಾ ತಾಲೂಕು ಘಟಕ ಹಾಗೂ ಎಬಿವಿಪಿ ಸಂಘಟನೆ ನಗರದಲ್ಲಿ ಬೈಕ್ ರ್ಯಾಲಿ ನಡೆಸಿ ಬಸವೇಶ್ವರ ಚೌಕ್‌ನಲ್ಲಿ ಸಮಾವೇಶಗೊಂಡಿತು.
ಕೆ.ಕೆ. ಗ್ಯಾಂಗ್ ಎಂಬ ಸಮಾಜ ಘಾತುಕ ಶಕ್ತಿಗಳ ಮೂಲ ಊರು ಶಹಾಪುರ ಪಟ್ಟಣ. ಇಲ್ಲಿಯೂ ಕೊಲೆಗಡುಕರು ಬೇರೆ ಬೇರೆ ಸಂಘಟನೆಗಳ ಅಡಿಯಲ್ಲಿ ತಲೆ ಮರೆಯಿಸಿಕೊಂಡಿದ್ದಾರೆ. ಇಂಥ ಶಕ್ತಿಗಳನ್ನು ಪೊಲೀಸರು ಮಟ್ಟ ಹಾಕಬೇಕು. ಇಲ್ಲದೆ ಹೋದರೆ ನಾಗರಿಕರು ಪೊಲೀಸರ ಮೇಲೆ ಭರವಸೆಯನ್ನು ಕಳೆದುಕೊಳ್ಳುತ್ತಾರೆಂದು ಶ್ರೀರಾಮ ಸೇನೆಯ ಅಧ್ಯಕ್ಷ ಸುನೀಲ ಮಾನು ಕಿಡಿಕಾರಿದರು.
ಬರೀ ಪೊಲೀಸರಿಂದಲೇ ಸಮಾಜ ಸುಧಾರಣೆಯಾಗುತ್ತದೆ ಎಂದು ಯಾರೂ ತಿಳಿಯಬಾರದು ಎಂದು ಎಬಿವಿಪಿ ಮುಖಂಡ ಅರವಿಂದ ಉಪ್ಪಿನ್ ತಿಳಿಸಿದರು.
ರ್ಯಾಲಿಯನ್ನು ಉದ್ದೇಶಿಸಿ ಸುಧೀರ ಚಿಂಚೋಳಿ, ಮಲ್ಲಿಕಾರ್ಜುನ ಮಲ್ಲಾಬಾದಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬಂಡೆಯವರ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷ ಮೌನ ಆಚರಿಸಿತು.
 ಬೈಕ್ ರ್ಯಾಲಿಯಲ್ಲಿ ಬಸವರಾಜ ಸೊನ್ನ, ನಾಗರಾಜ ಮೇದಾ, ಆನಂದ ಕುಂಬಾರ, ದೇವು ನಾಯ್ಕೋಡಿ, ಚಂದ್ರಶೇಖರ ಕುಂಬಾರ, ಅವಿನಾಶ ಸಿನ್ನೂರ, ಬಸ್ಸು ರಾಂಪುರ, ಶಿವಾಜಿ ಪವಾರ್, ಅವಿನಾಶ ಗುತ್ತೇದಾರ, ರಾಘವೇಂದ್ರ ಗುತ್ತೇದಾರ, ವೀರೇಶ ಬಡಿಗೇರ್, ಚೆನ್ನಯ್ಯ ಸ್ವಾಮಿ, ಸಿದ್ದು ಆನೇಗುಂದಿ, ಮಹೇಶ ಮಡಿವಾಳ, ಭೀಮಾಶಂಕರ, ಮಲ್ಲು ಹೊಸೂರು ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement