ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಹಳ್ಳಿ ಶಾಲೆಗಳಲ್ಲಿ ಹಾಜರಾತಿ ಕಡಿಮೆ'

Rashmi Kasaragodu
Updated On : 16 Jan 2014, 11:22 am

ಶಹಾಪುರ: ತಾಲೂಕಾದ್ಯಂತ ಗಣನೀಯ ಹಳ್ಳಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಸಂಪೂರ್ಣ ಇಳಿಮುಖವಾಗಿದ್ದು, ದಿನನಿತ್ಯ 16 ವರ್ಷದೊಳಗಿನ ಮಕ್ಕಳು ಕೆಲಸದಲ್ಲಿ ಹೆಚ್ಚು ನಿರತರಾಗಿರುವುದು ಕಂಡುಬರುತ್ತಿದೆ. ಶಿಕ್ಷಣ ಇಲಾಖೆ ಸಂಬಂಧಿಸಿದ ಸಿಆರ್‌ಪಿ, ಬಿಆರ್‌ಪಿಗಳು ಕಂಡು ಕಾಣದಂತಿರುವುದು ಶೈಕ್ಷಣಿಕ ವ್ಯವಸ್ಥೆಗೆ ತೊಂದರೆಯಾಗಿ ಸರ್ಕಾರದ ಯೋಜನೆಗಳು ವಿಫಲವಾಗುತ್ತಿವೆಯೆಂದು ಕರವೇ ತಾಲೂಕಾ ಘಟಕದ ಕಾರ್ಯದರ್ಶಿ ಶರಣು ಬೀರ್ನೂರ ಈ ಕುರಿತು ಮೇಲಾಧಿಕಾರಿಗಳಿಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ.
ಕೂಲಿಕಾರ್ಮಿಕರ ಕೊರತೆ ನೆಪದಲ್ಲಿ ಬಾಲಕಾರ್ಮಿಕರು ಹೆಚ್ಚು ಬಳಕೆಯಾಗುತ್ತಿದ್ದು, ದಿನನಿತ್ಯ ರಸ್ತೆಯ ಮೇಲೆ ದುಡಿಯಲು ಶಕ್ತರಿಲ್ಲದ ಮಕ್ಕಳನ್ನು ಟಂಟಂ ಮತ್ತು ಜೀಪ್‌ಗಳಲ್ಲಿ ಕರೆದುಕೊಂಡು ಹೋಗುತ್ತಿರುವುದು ಕಣ್ಮುಂದೆಯಿದ್ದರೂ ಬಾಲಕಾರ್ಮಿಕ ಇಲಾಖೆಯಾಗಲಿ, ಶಿಕ್ಷಣ ಇಲಾಖೆಯಾಗಲಿ ಸ್ಪಂದಿಸುತ್ತಿಲ್ಲ. ಸರ್ಕಾರ ವಿದ್ಯಾವಂಚಿತರನ್ನು ಗುರುತಿಸುವ ಕಾರ್ಯ ಇತ್ತೀಚಿಗೆ ಸಮೀಕ್ಷೆ ಮೂಲಕ ನಡೆಸಿದ್ದು ಒಂದೆಡೆಯಾದರೆ ಹಳ್ಳಿಗಳಲ್ಲಿನ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ತಾಲೂಕಿನ ಶಿಕ್ಷಣ ವ್ಯವಸ್ಥೆಯ ಹಿನ್ನಡೆಗೆ ಕಾರಣವಾಗುತ್ತಿದೆ. ತಕ್ಷಣವೇ ಈ ಕುರಿತು ಜಾಗೃತಿ ವಹಿಸಬೇಕೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement