ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹುಣಸಗಿ ಡಿಎಸ್‌ಎಸ್ ಪದಾಧಿಕಾರಿಗಳ ಆಯ್ಕೆ

Rashmi Kasaragodu
Updated On : 16 Jan 2014, 11:22 am

ಹುಣಸಗಿ: ಪ್ರತಿಯೊಬ್ಬ ಡಿಎಸ್‌ಎಸ್ ಕಾರ್ಯಕರ್ತ ಸಮಾಜದಲ್ಲಿನ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು. ಹಿಂದುಳಿದ ಜನಾಂಗದ ಶೈಕ್ಷಣಿಕ ಪ್ರಗತಿಗೆ ಪ್ರಯತ್ನಿಸಬೇಕು. ಯುವಕರು ಸದಾ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕೆಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಮುಖಂಡ ಮಲ್ಲಣ್ಣ ಕಟ್ಟಿಮನಿ ಕರೆ ನೀಡಿದರು.
 ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸಮಿತಿಯ ಮುಖಂಡರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಮುಖಂಡರಾದ ಶಿವಪ್ಪ ಸದಬ, ವಕೀಲರಾದ ಗೋಪಾಲ ವಜ್ಜಲ ಮಾತನಾಡಿದರು. ಇದೇ ಸಂದರ್ಭದಲ್ಲಿ  ಹುಣಸಗಿ ಹೋಬಳಿ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.  
ಮಲ್ಲಣ್ಣ ರಾಂಪುರ ಸಂಚಾಲಕರು ಹಾಗೂ ಬಸಪ್ಪ ಅಗತೀರ್ಥ, ವೀರೇಶ ಗುಳಬಾಳ, ಬಸವರಾಜ ಕಲ್ಲದೇವನಹಳ್ಳಿ, ಮಲ್ಲಿಕಾರ್ಜುನ ಮ್ಯಾಗೇರಿ ಸಂಘಟನಾ ಸಂಚಾಲಕರಾಗಿ, ವೆಂಕಟೇಶ ಚಲುವಾದಿ ಸಿದ್ದಾಪುರ ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement