ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೌಶಲ್ಯಾಭಿವೃದ್ಧಿ ತರಬೇತಿ

Rashmi Kasaragodu
Updated On : 17 Jan 2014, 12:03 pm

ಯಾದಗಿರಿ: ಕೌಶಲ್ಯಾಭಿವೃದ್ಧಿ ತರಬೇತಿ 2013-14ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಹಿಂದುಳಿದ ತಾಲೂಕುಗಳಲ್ಲಿ ವೃತ್ತಿನಿರತ ಕಸುಬುಗಳಲ್ಲಿ ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿಗಾಗಿ ಒಂದೂವರೆ ತಿಂಗಳಿನಿಂದ 3 ತಿಂಗಳ ಕಾಲ ಈ ಕೆಳಕಂಡ ವೃತ್ತಿಗಳಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಬೇಸಿಕ್ ವೆಲ್ಡಿಂಗ್, ಅಡ್ವಾನ್ಸ್ ವೆಲ್ಡಿಂಗ್, (ಎಂಐಜಿ) ಅಡ್ವಾನ್ಸ್ ವೆಲ್ಡಿಂಗ್(ಟಿಐಜಿ), ಸಿಎನ್‌ಸಿ ಮಿಲ್ಲಿಂಗ್, ಸಿಎನ್‌ಸಿ ಲೇಥ್, ಎಲೆಕ್ಟ್ರಿಕಲ್ ಮೇಂಟೆನನ್ಸ್. ವೃತ್ತಿಗಳಲ್ಲಿ ತರಬೇತಿಯನ್ನು ಪಡೆಯಲು ಅಭ್ಯರ್ಥಿಳು ಆಯ್ಕೆಗಾಗಿ ಜನವರಿ 17ರಂದು 11 ಗಂಟೆಗೆ ಸರ್ಕಾರಿ ಪದವಿ ಮಹಾವಿದ್ಯಾಲಯ ಚಿತ್ತಾಪುರ ರೋಡ್ ಯಾದಗಿರಿಯಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿ ಪಡೆಯಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಕಾರ್ಯಾಗಾರದಲ್ಲಿ ಹಾಜರಾಗಲು ತಿಳಿಸಲಾಗಿದೆ. ತರಬೇತಿಯನ್ನು ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ ಗುಲ್ಬರ್ಗದಲ್ಲಿ ಜರುಗಿಸಲಾಗುತ್ತದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು (08473-250541, 250542,250543) ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಯಾದಗಿರಿ ಇವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement