ಬಿಜೆಪಿ ನಮ್ಮ ಮಾತೃಪಕ್ಷ: ಡಾ.ಉಕ್ಕಿನಾಳ
ಶಹಾಪುರ: ಬದಲಾದ ರಾಜಕೀಯ ವಿದ್ಯಮಾನದಲ್ಲಿ ಯಡಿಯೂರಪ್ಪನವರ ಜೊತೆ ಗುರ್ತಿಸಿಕೊಂಡು ಕೆಜೆಪಿಯ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಡಾ.ಮಲ್ಲಣಗೌಡ ಉಕ್ಕಿನಾಳ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಜೊತೆ ಮರಳಿ ಬಿಜೆಪಿ ಸೇರಿದ್ದಾರೆ.
ತಾಲೂಕಿನ ಸಗರ, ಕೆಂಬಾವಿ, ಗೋಗಿ ಸೇರಿದಂತೆ ನೂರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಸೇರಿರುವುದಾಗಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷದ ಸಂಘಟನೆ ಕುರಿತು ತಾಲೂಕಿನಾದ್ಯಂತ ಸಂಚರಿಸಿ ಬರುವ ಲೋಕಸಭೆಯಲ್ಲಿ ಕ್ಷೇತ್ರದಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಯ ಗೆಲವಿಗಾಗಿ ಶ್ರಮಿಸುವೆ. ಅಲ್ಲದೆ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಚುನಾಯಿಸುವ ಮೂಲಕ ಭವಿಷ್ಯದ ಪ್ರಧಾನಮಂತ್ರಿ ಮೋದಿ ಅವರ ಕೈ ಬಲಪಡಿಸಬೇಕಿದೆ. ಅಲ್ಲದೆ ದೇಶದ ಹಿತದೃಷ್ಟಿಯಿಂದ ಈ ಬಾರಿ ಎಲ್ಲರೂ ಮೋದಿ ಅವರನ್ನು ಬೆಂಬಲಿಸಬೇಕಿದೆ. ಕ್ಷೇತ್ರದ ಜನತೆ ಕೃಪೆ ಬಿಜೆಪಿ ಮೇಲಿರಲಿ ಎಂದರು.