ಸರ್ಕಾರದ ನಿಷ್ಕಾಳಜಿ ಆರೋಪ: ಬಿಜೆಪಿ ಪ್ರತಿಭಟನೆ
ಗುರುಮಠಕಲ್: ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ಸಾವಿಗೆ ರಾಜ್ಯ ಸರ್ಕಾರದ ನಿಷ್ಕಾ ಳಜಿಯೇ ಕಾರಣವೆಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ವಿಶೇಷ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸುಪಾರಿ ಹಂತಕ ಮುನ್ನಾನನ್ನು ಬಂಧಿಸುವ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸರಕಾರ ವಿದೇಶಕ್ಕೆ ಕಳು ಹಿಸುವಂತೆ ಸಂಘಟನೆಗಳು ಹಾಗೂ ಶಾಸಕರು ಮನವಿ ಮಾಡಲಾಗಿತ್ತು. ಸರ್ಕಾರ ವಿದೇಶಕ್ಕೆ ಕಳುಹಿಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳದೆ ವಿಳಂಬ ಅನುಸರಿಸಿದ್ದರಿಂದ, ಒಬ್ಬ ಒಳ್ಳೆಯ ದಕ್ಷ ಅಧಿಕಾರಿಯನ್ನು ನಾಡು ಕಳೆದುಕೊಳ್ಳಬೇಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಫಲ: ಸಾರ್ವಜನಿಕರ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆ ಬಗ್ಗೆ ಸರ್ಕಾರ ಹಾಗೂ ಗೃಹ ಸಚಿವರು ನಿರ್ಲಕ್ಷಿಸುವ ಮೂಲಕ ಅಗೌರವ ತೋರಿಸಿದ್ದಾರೆ. ಈ ಘಟನೆ ಸಂಬಂಧಿಸಿದಂತೆ ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಐಜಿಪಿ ಅವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲಗೊಂಡಿದ್ದಾರೆ.
ಬಂಡೆ ಅವರ ಸಾವಿಗೆ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಅಪಾಯಕಾರಿ ಹಂತಕರನ್ನು ಬಂಧಿಸುವ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗೆ ಆಧುನಿಕ ರಕ್ಷಾ ಕವಚಗಳನ್ನು ಹಾಗೂ ಅಗತ್ಯ ಮಾರ್ಗದರ್ಶನದ ಸೂಕ್ತ ತಂಡವನ್ನು ಕಳುಹಿಸಬೇಕು.
ಆದರೆ ಘಟನೆ ಸಂದರ್ಭದಲ್ಲಿ ಸಿಬ್ಬಂದಿ ಬಳಿ ಸೂಕ್ತ ವ್ಯವಸ್ಥೆ ಇಲ್ಲದ ಪರಿಣಾಮ ಒಬ್ಬ ದಕ್ಷ ಪೊಲೀಸ್ ಅಧಿಕಾರಿಯನ್ನು ಕಳೆದುಕೊಳ್ಳುವಂತಾಗಿದೆ ಎಂದು ವಿಷಾದಿಸಿದರು.
1ಕೋಟಿ ಪರಿಹಾರ ನೀಡಿ: ಬಂಡೆ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ರು. 1 ಕೋಟಿ ಪರಿಹಾರ ಹಾಗೂ ಸರ್ಕಾರಿ ನೌಕರಿ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮತಕ್ಷೇತ್ರದ ಬ್ಲಾಕ್ ಅಧ್ಯಕ್ಷ ಕೆ. ದೇವದಾಸ, ಶರಣ ಗೌಡ ಬಾಡಿಯಾಳ್, ಚಂದುಲಾಲ್ ಚೌದ್ರಿ, ವೆಂಕಟಪ್ಪ ಅವಾಂಗಪುರ, ಮಲ್ಲೇಶಪ್ಪ ಬೇಲಿ, ವಿಶ್ವನಾಥ ಗೊಲ್ಲ, ಗೋಪಾಲ ರಡ್ಡಿ ಚಂಡರಕಿ, ಲಾಲಪ್ಪ ಕಂದೂರ, ನರಸಿಂಹುಲು ಗೊಲ್ಲ, ರಾಜೇಂದ್ರ ಕಲಾಲ್ ಇತರರಿದ್ದರು.