ಹತ್ತಿಕುಣಿ ಯುವಕರಿಂದ...
ಯಾದಗಿರಿ: ಹಂತಕ ಮುನ್ನಾ ಗುಂಡೇಟಿಗೆ ಗಾಯಗೊಂಡು ವೀರಮರಣ ಹೊಂದಿದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರಿಗೆ ಹತ್ತಿಕುಣಿ ಗ್ರಾಮದಲ್ಲಿ ಯುವಕರ ಬಳಗದಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಗ್ರಾಮದ ನಿವೃತ್ತ ಮಾಜಿ ಸೈನಿಕ ಶರಣಬಸಪ್ಪ ನಿಶಾನಿ, ಬಂಡೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಬಂಡೆ ನಿಧನದಿಂದ ನಾಗರಿಕ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಶರಣು ಗಡೇದ್ ಮಾತನಾಡಿ, ಗಾಯಗೊಂಡಿದ್ದ ಬಂಡೆ ಅವರಿಗೆ ಸರ್ಕಾರ ವಿದೇಶದಲ್ಲಿ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನಲೆ ಅವರು ನಿಧನರಾದರು. ಅವರ ಕುಟುಂಬ ವರ್ಗಕ್ಕೆ ದೇವರು ಆತ್ಮಸ್ಥೈರ್ಯ ನೀಡಲಿ ಎಂದು ಪ್ರಾರ್ಥಿಸಿದರು. ವೆಂಕಟರೆಡ್ಡಿ ಕೌಳೂರ, ಸುಭಾಷ ನಾಯಕ, ಚಂದ್ರಕಾಂತ ಕವಾಲ್ದಾರ, ಭೀಮರೆಡ್ಡಿ ರಾಂಪೂರಹಳ್ಳಿ, ಸಾಹೇಬಗೌಡ, ಸಂತೋಷ ಪಾಟೀಲ್, ದೇವಿಂದ್ರಪ್ಪ ಖಂಡಪ್ಪನೋರ್, ಕಮಲರೆಡ್ಡಿ, ಸಿದ್ದು ನಾಯಕ, ಶರಣು ಭಾವಿಕಟ್ಟಿ ಸೇರಿದಂತೆ ಇತರರಿದ್ದರು.