ಇಂದು ಗುರುವಂದನಾ, ಚಟುಕು ಗೋಷ್ಠಿ
ಸುರಪುರ: ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜ.18ರಂದು ಬೆಳಗ್ಗೆ 11 ಗಂಟೆಗೆ ಗುರುವಂದನಾ ಹಾಗೂ ಚುಟುಕು ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ ವಲಯ ಅಧ್ಯಕ್ಷ ಕೆ. ಬೀರಣ್ಣ ಆಲ್ದಾಳ ತಿಳಿಸಿದ್ದಾರೆ. ಮಾಜಿ ಸಚಿವ ರಾಜಾ ಮದನಗೋಪಾಲನಾಯಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೆ. ವೀರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜಿನ ಉಪ ಪ್ರಾಂಶುಪಾಲೆ ಸಂಗಮ್ಮ ನಾಗಾವಿ, ಚುಟುಕು ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಬಸವರಾಜ ಸಿನ್ನೂರು, ಪ್ರಮುಖರಾದ ಅಮರಯ್ಯಸ್ವಾಮಿ ಜಾಲಿಬೆಂಚಿ, ಶಿವಶರಣಪ್ಪ ಶಿರೂರ, ಡಾ. ನಾಗಣ್ಣ ಪೂಜಾರಿ ಭಾಗವಹಿಸಲಿದ್ದಾರೆ. ಹುಣಸಗಿಯ ನಿವೃತ್ತ ಶಿಕ್ಷಕ ವೀರಯ್ಯಸ್ವಾಮಿ ಹಿರೇಮಠ, ರಾಜನಕೋಳೂರಿನ ಹನುಮಂತಚಾರಿ ಪುರೋಹಿತ ಸನ್ಮಾನಿತಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.