ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕನ್ಯಾಕೋಳೂರಕ್ಕೆ ಐಜಿಪಿ ಭೇಟಿ; ಪರಿಶೀಲನೆ

Rashmi Kasaragodu
Updated On : 18 Jan 2014, 12:19 pm

ಗುಲ್ಬರ್ಗ ಶಹಾಪುರ: ತಾಲೂಕಿನ ಕನ್ಯಾಕೋಳೂರ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಪೊಲೀಸ್   ಬಂದೋಬಸ್ತ್ ಮಾಡಲಾಗಿದೆ ಎಂದು ಶಹಾಪುರಕ್ಕೆ ಭೇಟಿ ನೀಡಿದ ಐಜಿಪಿ ವಜೀರ ಅಹ್ಮದ್ ಹೇಳಿದ್ದಾರೆ.
ಸದ್ಯ ಅಲ್ಲಿ 7 ಕೆಎಸ್‌ಆರ್‌ಪಿ ತುಕಡಿ, 20 ಸಿಪಿಐ, 20 ಪಿಎಸ್‌ಐ ಮತ್ತು 400 ಜನ ಪೋಲಿಸರ ತಂಡವನ್ನು ನಿಯೋಜಿಸಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು. ಶಹಾಪುರ ತಾಲೂಕಿನಲ್ಲಿ ಶಾಂತಿ ಕದಡದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.  ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಫ್. ಆರ್. ಜಮಾದಾರ ಮಾಹಿತಿ ನೀಡಿ ಸದ್ಯ  3.75 ಲಕ್ಷ ತುರ್ತು ಪರಿಹಾರ ವ್ಯವಸ್ಥೆ ಮಾಡಿದ್ದು ಇನ್ನೂ 1.25 ಲಕ್ಷ ನಂತರ ಪರಿಹಾರ ರೂಪದಲ್ಲಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಗುಲ್ಬರ್ಗದಲ್ಲಿ ಚಿಕಿತ್ಸೆ: ಗಾಯಗೊಂಡ ಶಹಾಪುರ ಪೊಲೀಸ್ ಅಧಿಕಾರಿಗಳಿಬ್ಬರನ್ನು ಚಿಕಿತ್ಸೆಗೆಂದು ಗುಲ್ಬರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದು ಆಸ್ಪತ್ರೆ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement