ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮುಯೇ ಮುಬಾರಕ್ ಗೋಗಿ ಶರೀಫಕ್ಕೆ ಆಗಮನ

Rashmi Kasaragodu
Updated On : 18 Jan 2014, 12:19 pm

ಶಹಾಪುರ: ಮಹ್ಮದ್ ಪೈಗಂಬರರ ಮುಯೇ ಮುಬಾರಕ ಪೆಟ್ಟಿಗೆಯೊಂದಿಗೆ ಹುಬ್ಬಳ್ಳಿಯ ಎಸ್.ಎಸ್. ಖತೀಬ ಸಾಹೇಬ್ ಮತ್ತು ಅವರ ಮಕ್ಕಳು ಬಡಿ ದೇವಡಿಗೆ (ಗದ್ದುಗೆ) ಹೊತ್ತು ತಂದಿದ್ದಕ್ಕಾಗಿ ತಾಲೂಕಿನ ಗೋಗಿ ಗ್ರಾಮದಲ್ಲಿ ಮಂಗಳವಾರ ಭವ್ಯವಾಗಿ ಕಾರು ಬೈಕುಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಹಿಂದು ಮುಸ್ಲಿಂ ಎನ್ನದೆ ಎಲ್ಲರು ಒಂದು ಗೂಡಿ ಮಂಗಳವಾರ ಮುಂಜಾನೆಯಿಂದಲೇ ಪ್ರತಿ ಮನೆ ಮನೆಗಳಲ್ಲಿ ಹಾಗು ಬೀದಿ ಬದಿಗಳಲ್ಲಿ ಮುಯೇ ಮುಬಾರಕ್ ಬರುವಿಕೆಗಾಗಿ ಕಾದಿದ್ದರು. ಹೂವಿನ ಅಲಂಕಾರದೊಂದಿಗೆ ಬ್ಯಾನರ್‌ಗಳು ಕಟ್ಟಿದ್ದರು. ಹಲವು ಬಾರಿ ನೀರಿನಿಂದ ರಸ್ತೆ ತೊಳೆದು ಶುಚಿಗೊಳಿಸಿದ್ದರು. ಗೋಗಿಯ ದರ್ಗಾದ ಸಮೀಪ ವಾಹನ ಬರುತ್ತಿದ್ದಂತೆ ಗುಲಾಬಿ ನೀರು ಗಂಧ ಇತರೆ ಹೂವಿನ ಮಳೆ ಸುರಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement