ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರೇಲ್ವೆ ಎಸಿ ಅಳವಡಿಕೆಗೆ ಕ್ರಮ: ಜೋಶಿ

Rashmi Kasaragodu
Updated On : 18 Jan 2014, 12:19 pm

ಗುರುಮಠಕಲ್: ಬೇಸಿಗೆಯಲ್ಲಿ ಪ್ರಯಾಣಿಕರಿಗೆ ಬಿಸಿಲಿನ ಝಳ ತಾಕದಂತೆ ಯಾದಗಿರಿ ಹಾಗೂ ರಾಯ ಚೂರು ರೇಲ್ವೆ ನಿಲ್ದಾಣದಲ್ಲಿ 16 ಲಕ್ಷ ವೆಚ್ಚದಲ್ಲಿ ಎಸಿ ಅಳವಡಿಕೆಗೆ ಕ್ರಮಕೈಗೊಳ್ಳಲಾಗುವುದು ಎಂದು ಗುಂತಕಲ್ ವಿಭಾಗದ ರೇಲ್ವೆ ವ್ಯವಸ್ಥಾಪಕ ಮನೋಹರ ಜೋಶಿ ಹೇಳಿದರು. ಶುಕ್ರವಾರ ಬೆಳಿಗ್ಗೆ ಯಾದಗಿರಿ ರೈಲುನಿಲ್ದಾಣಕ್ಕೆ ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ, ರೇಲ್ವೆ ಸಚಿವ ಖರ್ಗೆ ಆದೇಶದಂತೆ ಮುಂದಿನ ತಿಂಗಳು ಫೆಬ್ರುವರಿ ಅಂತ್ಯದೊಳಗೆ ಈ ಎರಡು ನಿಲ್ದಾಣದಲ್ಲಿ ಏಕಕಾಲಕ್ಕೆ ಯಂತ್ರ ಅಳವಡಿಸಿ ಚಾಲನೆ ನೀಡಲಾಗುವುದು ಎಂದರು. ಯಾದಗಿರಿಯಲ್ಲಿ ಪ್ರಮುಖ ರೈಲುಗಳ ನಿಲುಗಡೆ ವಿಚಾರವಾಗಿ ಈಗಾಗಲೇ ಈ ಭಾಗದ ಜನರು ಸಾಕಷ್ಟು ಮನವಿ ಸಲ್ಲಿಸಿದ್ದಾರೆ. ಈ ಮನವಿಯೊಂದಿಗೆ ಇಲಾಖೆಯಿಂದ ವರದಿ ತಯಾರಿಸಿ ಸಿಕಿಂದ್ರಾಬಾದ್‌ನ ರೇಲ್ವೆ ಬೋರ್ಡ್‌ಗೆ ಕಳುಹಿಸಲಾಗಿದೆ. ಅಲ್ಲಿಂದ ಆದೇಶ ಬಂದ ತಕ್ಷಣ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಕುಡಿವ ನೀರು, ಶೌಚಾಲಯ ಸೇರಿದಂತೆ ಮೂಲ ಸೌಕರ್ಯದಿಂದ ನರಳುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗುವದು. ಜೊತೆಗೆ ರೇಲ್ವೆ ನಿಲ್ದಾಣದ ಸ್ವಚ್ಛತೆಗೆ ಹೆಚ್ಚು ಗಮನ ಹರಿಸುವಂತೆ ರೇಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಗುಂತಕಲ್‌ನ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸ್ವಾಮಿ ನಾಯಕ, ಯಾದಗಿರಿ ರೇಲ್ವೆ ನಿಲ್ದಾಣದ ವ್ಯವಸ್ಥಾಪಕ ರಾಜನ್ದಾಸ್, ಎಂ.ಎನ್.ಎ ಖಾನ್, ರೇಲ್ವೆ ಸುರಕ್ಷಾ ದಳದ ಪಿಎಸ್‌ಐ ಎಸ್. ಸುಧಾಕರಬಾಬು, ನಿಖಿಲ್ ಅಗರವಾಲ್, ಸುರೇಶ ನವಗಿರೆ ಸೇರಿದಂತೆ ಇತರರಿದ್ದರು.
ಬಂಡೆ ಯುವಕರಿಗೆ ಮಾದರಿ
ಯಾದಗಿರಿ: ವೀರಮರಣ ಹೊಂದಿದ ಸಾಹಸಿ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆಯ ಕರ್ತವ್ಯ ನಿಷ್ಠೆ ಹಾಗೂ ರೋಮಾಂನಚಕಾರಿ ಜೀವನ ಇಂದಿನ ಯುವಕರಿಗೆ ಮಾದರಿಯಾಗಿದೆ. ಹುತಾತ್ಮ ಬಂಡೆ ಪೊಲೀಸ್ ಇಲಾಖೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದು ಅಮರರಾಗಿದ್ದಾರೆಂದು ಸಾಹಿತಿ ಅಯ್ಯಣ್ಣ ಹುಂಡೆಕಾರ, ಎಎಸ್‌ಐ ಕೃಷ್ಣ ಸುಬೇದಾರ, ಬಸವರಾಜ ಮೊಟ್ನಳ್ಳಿ, ಅಂಬಯ್ಯ ಶಾಬಾದಿಯವರು ಅಭಿಪ್ರಾಯಟ್ಟರು. ಗಾಂಧಿ ವೃತ್ತದಲ್ಲಿ ಹಿಂದು ಜಾಗರಣ ವೇದಿಕೆ ಮತ್ತು ನಾಗರಿಕರ ವತಿಯಿಂದ ಮಲ್ಲಿಕಾರ್ಜುನ ಬಂಡೆಗೆ ಏರ್ಪಡಿಸಿದ್ದ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತಾನಾಡಿ, ಬಂಡೆ ಹೆಸರು ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ಉಳಿಯುವುದು ಎಂದರು.
 ಕಲಬುರ್ಗಾ ನಗರದ ಸೂಕ್ತ ಸ್ಥಳದಲ್ಲಿ ಅವರ ಪುತ್ಥಳಿ ಸ್ಥಾಪಿಸಿ, ಮುಂದೆ ಅವರ ಮಕ್ಕಳಿಗೆ ಸರ್ಕಾರಿ ಇಲಾಖೆಯಲ್ಲಿ ನೌಕರಿಗೆ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement