ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶರಣರು ಸಂತರಿಂದ ಕನ್ನಡ ನೆಲ ಪಾವನ: ಮುಗುಳನಾಗಾವ

Rashmi Kasaragodu
Updated On : 18 Jan 2014, 12:18 pm

ಶಹಾಬಾದ್: ಕನ್ನಡ ನಾಡಿನಲ್ಲಿ ಶರಣರು, ಸಂತರು ಜನ್ಮತಾಳಿ ತಮ್ಮ ತತ್ವಾದರ್ಶಗಳಿಂದ ಜನರಿಗೆ ಸನ್ಮಾರ್ಗದಲ್ಲಿ ಕರೆದೊಯ್ದು ಈ ನೆಲವನ್ನು ಪಾವನಗೊಳಿಸಿದ್ದಾರೆ. ದೇಶದಲ್ಲಿ ಅಧರ್ಮ, ಅನೀತಿಗಳು ತಾಂಡವಾಡಿದಾಗ ಸಂತರು, ಮಹಾಂತರು, ಸಿದ್ದಿಪುರುಷರು ಅವತಾರ ತಾಳಿ ಧರ್ಮ ಸ್ಥಾಪನೆ ಮಾಡಿದ್ದಾರೆಂದು ಗುಲ್ಬರ್ಗದ ಶರಣಬಸವೇಶ್ವರ ಸಂಸ್ಥಾನದ ಬಸವರಾಜಪ್ಪ ಅಪ್ಪಾ ಹೇಳಿದರು.
ಮುಗುಳನಾಗಾವ ಕಟ್ಟಿಮನಿ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಅಭಿನವ ಸಿದ್ದಲಿಂಗ ಶ್ರೀ ಪಟ್ಟಧೀಕಾರದ ಬೆಳ್ಳಿ ಮಹೋತ್ಸವ ಆಚರಣೆಗೆ ಚಾಲನೆ ನೀಡಿ ಮಾತನಾಡಿ, ಚಿಕ್ಕದಾದ ಮಠವನ್ನು ಶ್ರೀಗಳು ಪೀಠಾಧಿಪತಿಗಳಾದ ನಂತರ ಭಕ್ತರ ಸಹಯೋಗದೊಂದಿಗೆ ಬೃಹದಾಕಾರವಾಗಿ ನಿರ್ಮಿಸಿದರು. ಭಕ್ತರ ಅನುಕೂಲಕ್ಕಾಗಿ, ಕಲ್ಯಾಣ ಮಂಟಪ ನಿರ್ಮಾಣ ಹಂತದಲ್ಲಿ ಅತಿಥಿ ಗೃಹ ನಿರ್ಮಿಸುತ್ತಿರುವುದು ಪ್ರತಿದಿನ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿ ತಮ್ಮ ಸಮಸ್ಯೆಗಳಿಗೆ ಶ್ರೀಗಳ ಮಾರ್ಗದರ್ಶನದಲ್ಲಿ ಪರಿಹಾರ ಕಂಡಿದ್ದಾರೆ ಎಂದರು.
ನಾವದಗಿ ಚೆನ್ನಬಸವ ಸ್ವಾಮಿ, ಕಟಕೋಳ ನಾಗಭೂಷಣ ಸ್ವಾಮಿ, ಚಿಂಚನಸೂರ ಸಿದ್ದಮಲ್ಲ ಶ್ರೀ ಹಾಗೂ ಚಿತ್ತಾಪುರದ ಮಾಜಿ ಶಾಸಕ ವಾಲ್ಮೀಕಿ ನಾಯಕ ಅವರು ಸಮಾರಂಭ ಕುರಿತು ಮಾತನಾಡಿದರು. ಗಣ್ಯರಾದ ಕರಸಿದ್ದಪ್ಪ ಪಾಟೀಲ, ಸಿದ್ದಯ್ಯಸ್ವಾಮಿ ಮಠಪತಿ, ಬೆಳ್ಳಿಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಶಶಿಕಾಂತ ಪಾಟೀಲ ಭಂಕೂರ, ಪ್ರಧಾನ ಕಾರ್ಯದರ್ಶಿಗಳಾದ ರಾಜಶೇಖರ ಕಣಕಿ, ಶಂಭುಲಿಂಗ ಗುಂಡಗುರ್ತಿ, ಭೀಮಶಾ ಜಿರೋಳಿ, ಗುರುಸಿದ್ದಪ್ಪ ಪಾಟೀಲ, ಮಹಾಂತಯ್ಯಸ್ವಾಮಿ ಮಠ ವೇದಿಕೆಯಲ್ಲಿದ್ದರು. ಗೌಡಗಾಂವನ ಶಿವರುದ್ರಯ್ಯ ಗವಾಯಿ ಹಾಗೂ ಎಂ. ನೇಹಾ ಅವರ ವಚನ ಗಾಯನ ನಡೆಯಿತು. ಜ್ಞಾನೇಶ್ವರ ಕುಮಾರ ತಬಲಾ ಸಾಥ್ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement