ಹೇರೂರ್ ಉತ್ತಮ ಸಂಘಟನಕಾರರು
ಯಾದಗಿರಿ: ತಾಲೂಕಿನ ಮೋಟ್ನಳ್ಳಿ ಗ್ರಾಮದಲ್ಲಿ ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ನೇತೃತ್ವದಲ್ಲಿ ದಿ. ವಿಠ್ಠಲ್ ಹೇರೂರ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ನೂರಾರು ಸಮಾಜ ಬಂಧುಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಉಮೇಶ ಮುದ್ನಾಳ ಮಾತನಾಡಿ, ಹೆರೂರ್ ನಮ್ಮ ಸಮಾಜದ ಅಭಿವೃದ್ಧಿಗಾಗಿ ಸಂಘಟನೆಗಾಗಿ ಹಗಲಿರುಳು ಶ್ರಮಿಸಿ, ಸಂಘಟಿಸಿ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಪದಾಧಿಕಾರಿಗಳು ವಿವರ: ವಿಠ್ಠಲ ಹೇರೂರ್ ಅಭಿಮಾನಿಗಳ ಸಂಘಕ್ಕೆ ವೆಂಕಟರಾಮ ಜೆ. ನಾಟೇಕಾರ ಅಧ್ಯಕ್ಷರು, ಸಾಬಣ್ಣ ನಾಚವಾರ ಉಪಾಧ್ಯಕ್ಷರು, ದೇವಿಂದ್ರ ಎಸ್ ಘಟ್ಲಾ ಪ್ರಧಾನ ಕಾರ್ಯದರ್ಶಿ, ಕರುಣಪ್ಪ ನಾಟೇಕಾರ ಸ. ಕಾರ್ಯದರ್ಶಿ, ದೇವಿಂದ್ರಪ್ಪ ಯಲಬತ್ತಿ ಸಂಘಟನಾ ಕಾರ್ಯದರ್ಶಿ, ವಿಶ್ವರಾಧ್ಯ ನಾಟೇಕಾರ ಖಜಾಂಚಿ ಮಾಡಲಾಯಿತು.
ಅಂಬಿಗರ ಚೌಡಯ್ಯ ಘಟಕ: ಗುರುನಾಥ ಆರ್ ಘಾಟ್ಲಾ ಅಧ್ಯಕ್ಷರು, ಶೇಖರ ದ್ಯಾವರ ಗೌ.ಅಧ್ಯಕ್ಷ, ಮಲ್ಲಿಕಾರ್ಜುನ ಬಗಲಮಡ್ಡಿ ಉಪಾಧ್ಯಕ್ಷ, ಕರುಣಪ್ಪ ಯಲಬತ್ತಿ ಪ್ರ. ಕಾರ್ಯದರ್ಶಿ, ಈರಪ್ಪ ಯಲಬತ್ತಿ ಆಯ್ಕೆ ನಡೆಯಿತು.