ಉಳಿತಾಯ ಖಾತೆ ತೆಗೆಯಲು ವಿಶೇಷ ಕಾರ್ಯಕ್ರಮ
ಗುಲ್ಬರ್ಗ: ಪ್ರತಿವರ್ಷವು ಅಂಚೆ ಇಲಾಖೆಯು ಜ.24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳದಿನವನ್ನು ಆಚರಿಸುತ್ತಿದೆ. ಅದರಂಗವಾಗಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಜ.24 ರಿಂದ 28ರವರೆಗೆ ಹೆಣ್ಣು ಮಕ್ಕಳ ಹೆಸರಿನ ಮೇಲೆ ಉಳಿತಾಯ ಖಾತೆ ತೆಗೆಯಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಅಂಚೆ ಕಚೇರಿಯಲ್ಲಿ ಸಣ್ಣ ಉಳಿತಾಯ ಖಾತೆ ತೆರೆಯುವಂತೆ ಪ್ರೇರೆಪಿಸಲಾಗುವುದು ಹಾಗೂ ಈ ಯೋಜನೆಯಡಿ ವಿದ್ಯಾರ್ಥಿನಿಯರು ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದಲ್ಲಿ ಆ ಖಾತೆಗೆ ವರ್ಷಕ್ಕೆ ಶೇ.4 ರಷ್ಟು ಬಡ್ಡಿಯನ್ನು ನೀಡಲಾಗುವುದು. ಈ ಸೇವೆಯು ಉತ್ತರ ಕರ್ನಾಟಕ ಎಲ್ಲ 4,480 ಅಂಚೆ ಕಚೇರಿಗಳಲ್ಲಿ ಲಭ್ಯವಿರುತ್ತದೆ. ಒಟ್ಟಾರೆ ವಿಶೇಷ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದುವಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವುದಾಗಿದೆ. ದೂ. 0836- 274087ಯ 2441708ನ್ನು ಸಂಪರ್ಕಿಸುವಂತೆ ಅಂಚೆ ಇಲಾಖೆಯ ಹಿರಿಯ ಅಧೀಕ್ಷಕರು ಕೋರಿದ್ದಾರೆ.